ನಾವೆಲ್ಲಾ ತಿಳಿದಿರುವಂತೆ ನಮ್ಮ ದೇಶದ ಭ್ರಷ್ಟ ರಾಜಕಾರಣಿಗಳ ಹಾಗೂ ಉದ್ಯೋಗಪತಿಗಳ ಸಾವಿರಾರು ಕೋಟಿ ರೂಪಾಯಿಗಳು ಹೊರ ದೇಶಗಳಲ್ಲಿ ಅಂದರೆ Swiss bank, Sweden, Germany, ಅಮೇರಿಕ ಹೀಗೆ ಹತ್ತು ಹಲವು ದೇಶಗಳ Bank ಗಳಲ್ಲಿ Black money ಯಾಗಿ ಇದೆ. ಇದು ಕೇವಲ ನಮ್ಮ ದೇಶದ ಸಮಸ್ಯೆ ಮಾತ್ರವಲ್ಲ. ಪ್ರಪಂಚದಲ್ಲಿ ಅಮೇರಿಕವೂ ಸೇರಿ ಹೆಚ್ಚಿನ ದೇಶಗಳಿಗೆ ಇದೊಂದು ದೊಡ್ಡ ಸಮಸ್ಯೆಯಾಗಿ ತಲೆದೋರಿದ ಪರಿಣಾಮ ಅದರ ಗಂಭೀರತೆ ಕಂಡ UNO, ಎಲ್ಲಾ ದೇಶವೂ right time information ಅಂದರೆ “ವಿದೇಶಗಳಲ್ಲಿ ಯಾವುದೇ ರೀತಿಯ ವ್ಯವಹಾರ ನಡೆದರೂ ಅದರ ವಿವರ ಕೂಡಲೇ ಆಯಾಯ ದೇಶಕ್ಕೆ ತಿಳಿಸತಕ್ಕದ್ದು ” ಎಂಬ resolution ಪಾಸ್ ಮಾಡುತ್ತದೆ. ಆದರೆ ಯಾವ ದೇಶಗಳ ನಡುವೆ bilateral treatyಗಳು ಇರುವುದೋ ಅವರಿಗೆ ಈ rule ಲಾಗು ಆಗುವುದಿಲ್ಲ. ನಮ್ಮ ಜನ ಯಾವೆಲ್ಲಾ ದೇಶದಲ್ಲಿ black money ಇಟ್ಟಿದ್ದಾರೋ ಆ ಎಲ್ಲಾ ದೇಶಗಳೊಡನೆ ನಮ್ಮ ದೇಶದ್ದು ಒಂದಲ್ಲ ಒಂದು ರೀತಿಯ bilateral relations ಇದ್ದುದರಿಂದ ಯಾವ ದೇಶವು ಕೂಡ ನಮಗೆ black money holder ಗಳ information ಕೊಡಬೇಕಾಗಿರಲಿಲ್ಲ.
ಇಂತಹಾ ಪರಿಸ್ಥಿತಿಯಲ್ಲಿ 2009ರ ಎಪ್ರಿಲ್ನಲ್ಲಿ ರಾಮ್ ಜೆಟ್ಮಲಾನಿ ಮತ್ತು 5 ಸದಸ್ಯರು ಸುಪ್ರೀಮ್ ಕೋರ್ಟ್ನಲ್ಲಿ “ವಿದೇಶದಿಂದ black money ತರುವ ಉದ್ದೇಶಕ್ಕಾಗಿ ವಿಶೇಷ ತಂಡ (SIT) ರಚಿಸುವಂತೆ ಕೇಂದ್ರ ಸರಕಾರಕ್ಕೆ ಕೋರ್ಟ್ ನಿರ್ದೇಶನ ನೀಡಬೇಕೆಂದು” ಒಂದು PIL ಹಾಕುತ್ತಾರೆ. ಇದರಿಂದ ವಿಚಲಿತಗೊಂಡ UPA ಸರಕಾರ PIL ಹಾಕಿದವರು BJP ಗೆ ಹತ್ತಿರದವರು,ಇದೊಂದು ರಾಜಕೀಯ ಪ್ರೇರಿತ ಎಂದು ಅಫಿಡಾವಿಟ್ ಹಾಕಿದರೂ ಸುಪ್ರೀಂ ಕೋರ್ಟ್ 2011 ರಲ್ಲಿ Special Investigating Team(SIT) ಮಾಡುವಂತೆ order ಮಾಡುತ್ತದೆ. ಅದಕ್ಕೆ ಪ್ರತ್ಯುತ್ತರ ಕೊಟ್ಟ ಸರಕಾರ ನಾವೀಗಾಗಲೇ higher commission ಒಂದನ್ನು ರಚಿಸಿದ್ದು SIT ಯ ಅಗತ್ಯವಿಲ್ಲವೆಂದು ಹೇಳುತ್ತದೆ. ಅದಕ್ಕೆ SC ಸರಕಾರಕ್ಕೆ ನೋಟಿಸ್ ಜಾರಿ ಮಾಡಿ ನಿಮ್ಮ HCL not sufficient ಎಂದು ಹೇಳಿ SIT ತಂಡಕ್ಕೆ 2 retired Judge, RBI, CBI, RAW ದವರನ್ನು ಸೇರಿಸಿಕೊಳ್ಳಬೇಕೆಂದು ಅದು independently work ಮಾಡುವಂತಿರಬೇಕು ಎಂದು order ಮಾಡಿದಾಗ ಕೇಂದ್ರ ಸರಕಾರ ಈ ರೀತಿಯ ತಂಡ ಸರಕಾರಿ ವ್ಯವಸ್ಥೆಗೆ ತೊಂದರೆ. ಆದ್ದರಿಂದ SC ತನ್ನ ನಿರ್ಧಾರವನ್ನು revise ಮಾಡಬೇಕೆಂದು ಕೋರ್ಟ್ನ್ನು ಕೇಳಿಕೊಂಡು ಮೌನವಾಗಿಬಿಡುತ್ತದೆ. ಇದರಿಂದ ಸಿಟ್ಟುಗೊಂಡ SC 2014 ರ ಮಾರ್ಚಿನಲ್ಲಿ ತಾನು ಆದೇಶ ನೀಡಿ 3 ವರ್ಷಗಳೇ ಕಳೆದಿದ್ದರೂ SIT ರಚನೆ ಮಾಡದೇ ಇದ್ದುದಕ್ಕೆ ಛೀಮಾರಿ ಹಾಕುತ್ತದೆ. ಆಗ UPA ಕೇಂದ್ರ ಸರಕಾರ ತನಿಖೆ ನಡೆಯುತ್ತಿದೆ ಎಂದು ಹೇಳಿ SIT ನಿರ್ಧಾರವನ್ನು ಹಿಂಪಡೆಯುವಂತೆ ಮತ್ತೆ ಕೋರ್ಟನ್ನು ಕೇಳಿಕೊಳ್ಳುತ್ತದೆ ಹೊರತು 2011-14 ರವೆಗೂ SIT ಯನ್ನು ರಚಿಸುವ ಗೋಜಿಗೆ ಹೋಗಲೇ ಇಲ್ಲ.
ಅದೇ ವರ್ಷ 2014 ರ ಮೇ ತಿಂಗಳಲ್ಲಿ ಗದ್ದುಗೆ ಏರಿದ ಮೋದಿ ಸರಕಾರ ಹಿಂದಿನ ಸರಕಾರ SIT ಯ ನಿರ್ಧಾರವನ್ನು ಹಿಂಪಡೆಯುವಂತೆ ಕೇಳಿಕೊಂಡ ಅರ್ಜಿಯನ್ನು ಹಿಂಪಡೆದು ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ಅದೇ ಮೇ ತಿಂಗಳಿನಲ್ಲಿಯೇ ತನ್ನ ಮೊತ್ತ ಮೊದಲ ಕ್ಯಾಬಿನೆಟ್ ಮೀಟಿಂಗ್ನಲ್ಲಿಯೇ SIT ಯನ್ನ ರಚನೆ ಮಾಡುತ್ತದೆ.
ಆ ಸಮಯದಲ್ಲಿ ಜರ್ಮನಿಯಲ್ಲಿನ HSBC BANK ನಲ್ಲಿಟ್ಟಿದ್ದಾರೆನ್ನಲಾದ 627 ಮಂದಿಯ ಹೆಸರುಗಳು ಲೀಕ್ ಆಗಿ ಫ್ರಾನ್ಸ್ನ ಮೂಲಕ ಮೋದಿ ಸರಕಾರದ ಕೈಗೆ ಬಂದಿದ್ದನ್ನು ಸುಪ್ರೀಂಕೋರ್ಟ್ನ ಆಜ್ಞೆಯಂತೆ “ಮುಚ್ಚಿದ ಕವರ್” ನಲ್ಲಿ ಕೋರ್ಟ್ಗೆ ಒಪ್ಪಿಸಿತು. ಆ ಕೂಡಲೇ ವಿರೋಧ ಪಕ್ಷ ಅದರಲ್ಲಿರುವ ಹೆಸರುಗಳನ್ನು ಸಾರ್ವಜನಿಕಗೊಳಿಸಬೇಕೆಂದು ರಸ್ತೆ ರಸ್ತೆಗಳಲ್ಲಿ ಒತ್ತಾಯ ಮಾಡುತ್ತಿದ್ದಾಗ ಸುಪ್ರೀಂ ಕೋರ್ಟ್ ಆ ಲಕೋಟೆಯನ್ನು ತಾನು ಕೂಡ open ಮಾಡುವುದಿಲ್ಲ. ಅದನ್ನು ಕೇವಲ SIT ಮಾತ್ರ open ಮಾಡಿ ಅದರಲ್ಲಿರುವ ಹೆಸರುಗಳ ಬಗ್ಗೆ ತನಿಖೆ ನಡೆಸಿ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸುವಂತೆ ಆಜ್ಞೆ ಮಾಡಿತು. ಅಲ್ಲದೇ ಕೇಂದ್ರ ಸರಕಾರ SIT ತನಿಖೆ ಬೇಕಾಗುವ ಎಲ್ಲಾ ಸರಕಾರಿ ಸೌಲಭ್ಯ ವ್ಯವಸ್ಥೆ ಮಾಡುವಂತೆ order ಮಾಡಿತು. ಅದರಂತೆ ಇದೀಗ ಪ್ರಸ್ತುತ SIT ತಂಡ Black money holders ಮೇಲೆ ತನಿಖೆ ನಡೆಸಿ ಕೋರ್ಟ್ಗೆ ವರದಿ ಒಪ್ಪಿಸಬೇಕಿದೆ. ಅ ವರದಿಯ ಮೇಲೆ ಸುಪ್ರೀಂಕೋರ್ಟ್ ತನ್ನ ತೀರ್ಮಾನ ತಿಳಿಸುವವರೆಗೂ ಕೇಂದ್ರ ಸರಕಾರದ ಕೆಲಸವೆಂದರೆ SIT ತಂಡಕ್ಕೆ ತನ್ನಿಂದಾಗುವ ಎಲ್ಲಾ ರೀತಿಯ ಸಹಾಯ ಮಾಡುವುದು ಮಾತ್ರ ಎಂಬುದನ್ನು ಮೊದಲು ಭಾರತೀಯ ಜನತೆ ತಮ್ಮ ತಲೆಗೆ ಹಾಕಿಕೊಳ್ಳಬೇಕಾದ ಅಗತ್ಯ ಬಹಳವಾಗಿದೆ.
ಹೀಗೆ ಕಪ್ಪು ಹಣವನ್ನು ವಾಪಾಸ್ ತರುವ ಪ್ರಕ್ರಿಯೆಯಲ್ಲಿ ಸುಪ್ರೀಂ ಕೋರ್ಟ್ನ ಆದೇಶವಿದ್ದರೂ ಪ್ರತಿಹಂತದಲ್ಲೂ ಅಡೆತಡೆಗಳನ್ನೇ ಸೃಷ್ಟಿಸುತ್ತಾ ಬಂದ ಕಾಂಗ್ರೇಸ್ ನೇತೃತ್ವದ UPA ಕೂಟ ಇಂದು ಮೋದಿ ಸರಕಾರವು ಕಪ್ಪು ಹಣವನ್ನು ತರುತ್ತೇನೆಂದು ಜನರನ್ನು ನಂಬಿಸಿ ಚುನಾವಣೆಯಲ್ಲಿ ಗೆದ್ದ ನಂತರ ತನ್ನ ಆಶ್ವಾಸನೆಗಳನ್ನು ಕೈ ಬಿಡುವ ಮೂಲಕ 130 ಕೋಟಿ ಜನತೆಗೆ ಮೋದಿಯವರು ಮೋಸ ಮಾಡಿದ್ದಾರೆಂದು ಜನರನ್ನು ನಂಬಿಸಲು ಹಗಲು-ರಾತ್ರಿ ಒಂದು ಮಾಡುತ್ತಿದ್ದು, ಜನರು ಅವರ ಮೋಸಕ್ಕೆ ಬಲಿಯಾಗಬಾರದೆಂದು ನನ್ನ ಕಳಕಳಿಯ ವಿನಂತಿ ಸ್ನೇಹಿತರೇ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.