ಮಂಗಳೂರು: ಪದವಿ ಕಾಲೇಜುಗಳಲ್ಲಿ ಬೋಧಿಸುತ್ತಿರುವ ಉಪನ್ಯಾಸಕರುಗಳಿಗೆ ಈಗ ನಿಗದಿಪಡಿಸಿರುವಂತೆ ವಾರಕ್ಕೆ 16 ಗಂಟೆಗಳ ಬೋಧನಾ ಅವಧಿಯನ್ನು 22 ಗಂಟೆಗೆ ಏರಿಸಿ ಆದೇಶ ಹೊರಡಿತ್ತು. ಯಾವುದೇ ಮುನ್ಸೂಚನೆ ನೀಡದೇ ಈ ಆದೇಶವನ್ನು ಮತ್ತೆ ಅನುಷ್ಠಾನಗೊಳಿಸಲು ಹೊರಟಿರುವುದು ಗೊಂದಲಕ್ಕೆ ಕಾರಣವಾಗಿದೆ. ಇದನ್ನು ತಗ್ಗಿಸುವಂತೆ ಶಿಕ್ಷಣ ಇಲಾಖೆಗೆ ಬಿಜೆಪಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಒತ್ತಾಯಿಸಿದರು.
ಈ ಕುರಿತು ಸುಮಾರು 8 ತಿಂಗಳ ಹಿಂದೆ ಶಿಕ್ಷಣ ಸಚಿವರು ಹಾಗೂ ಇಲಾಖಾ ಅಧಿಕಾರಿಗಳ ಜೊತೆಗೆ ಚರ್ಚೆ ನಡೆದಿದ್ದು, ಈ ನಿರ್ಣಯ ಅವೈಜ್ಞಾನಿಕ ಮತ್ತು ಕಷ್ಟಸಾಧ್ಯವಾಗಿರುವುದರ ಹಿನ್ನಲೆಯಲ್ಲಿ ಆದೇಶವನ್ನು ಹಿಂಪಡೆಯಲಾಗಿತ್ತು.
ಸರ್ಕಾರವು ಈ ಬದಲಾವಣೆಯನ್ನು ತರುವ ಮೊದಲು ಉಪನ್ಯಾಸಕರ ಕಾರ್ಯಭಾರ, ಪಾಠದ ಸಿದ್ದತೆಗೆ ಮತ್ತು ಸಂಶೋಧನೆಗೆ ಅಗತ್ಯವಿರುವ ಸಮಯ, ಅರೆ ವಾರ್ಷಿಕ ವ್ಯವಸ್ಥೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕಾದ ಅನಿವಾರ್ಯತೆ ಹಾಗೂ ಹೆಚ್ಚಿನ ಪರೀಕ್ಷೆಗಳಿಂದಾಗಿ ಕಾರ್ಯಭಾರದ ಒತ್ತಡ, ಪ್ರಾಜೆಕ್ಟ್ ವರ್ಕ್ಗಳಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಹೆಚ್ಚುತ್ತಿರುವ ಆಡಳಿತಾತ್ಮಕ ಜವಾಬ್ದಾರಿಗಳು, ಕಾಲೇಜಿನಲ್ಲಿ ಹೆಚ್ಚುತ್ತಿರುವ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಶ್ಯಕತೆ ಮುಂತಾದ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಡಸುವಚಂತೆ ತಿಳಿಸಿದರು.
ಇದರ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಕಾಲೇಜು ಶಿಕ್ಷಣದ ಒಟ್ಟು ಗುಣಮಟ್ಟವನ್ನು ಕಾಪಾಡುವ ದೃಷ್ಠಿಯಲ್ಲಿ ಸಂಬಂಧಪಟ್ಟ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅವಶ್ಯವಿರುವುದರಿಂದ ಈ ನಿರ್ಣಯದ ಪುನರ್ ಪರಿಶೀಲನೆಯ ಅಗತ್ಯವಿರುವ ಹಿನ್ನಲೆಯಲ್ಲಿ ಈಗ ಪ್ರಸ್ತುತ ಜಾರಿಯಲ್ಲಿರುವ U.ಉ.ಅ. ನಿಯಮದಂತೆ 16 ಗಂಟೆಗಳ ಕಾರ್ಯಭಾರ ಪದ್ಧತಿಯನ್ನು ಮುಂದೂವರೆಸಬೇಕೆಂದು ಕೋರಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.