ವಿಶ್ವಸಂಸ್ಥೆ: ಯೋಗ ತಾರತಮ್ಯ ಮಾಡಲ್ಲ, ಅದು ಸಂತೃಪ್ತಿಯ ಭಾವವನ್ನು ನೀಡುತ್ತದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್ ತಿಳಿಸಿದ್ದಾರೆ.
ಜೂನ್ 21ರಂದು ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಡೆಯುತ್ತಿರುವ ಹಿನ್ನಲೆಯಲ್ಲಿ ಅವರು ಈ ಸಂದೇಶ ನೀಡಿದ್ದಾರೆ.
‘ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭ ಯೋಗವನ್ನು ಪ್ರಯತ್ನಿಸಿದೆ. ಒಂದು ಆಸನದಲ್ಲೇ ಅದು ನನಗೆ ಸಂತೃಪ್ತಿಯ ಭಾವವನ್ನು ನೀಡಿತು, ಅದು ನನಗೆ ಸ್ಥಿರತೆಯನ್ನು ನೀಡಿತು. ಯಾರೊಬ್ಬರು ಯೋಗ ಮಾಡಬಹುದು ಎಂದು ಆಗ ನನಗನಿಸಿತು. ಯೋಗ ತಾರತಮ್ಯ ಮಾಡುವುದಿಲ್ಲ, ಎಲ್ಲಾ ವಯಸ್ಸಿನವರೂ ಸಾಮರ್ಥ್ಯದ ಭೇದವಿಲ್ಲದೆ ಇದನ್ನು ಮಾಡಬಹುದು’ ಎಂದಿದ್ದಾರೆ.
ಯೋಗದ ಬಗ್ಗೆ ಹಲವಾರು ವಾದ ವಿವಾದಗಳು ಎದ್ದಿರುವ ಬೆನ್ನಲ್ಲೇ ಅವರು ಈ ಹೇಳಿಕೆಯನ್ನು ನಿಡಿರುವುದು ಮಹತ್ವ ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.