ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ನಾಳೆ ಆಧುನಿಕ ಸಂವಹನ ಉಪಗ್ರಹ ಜಿಸ್ಯಾಟ್ -29 ಅನ್ನು ಆನ್ಬೋರ್ಡ್ ರಾಕೆಟ್ ಜಿಎಸ್ಎಲ್ವಿ ಮಾರ್ಕ್-3 ಮೂಲಕ ಉಡಾವಣೆಗೊಳಿಸಲಿದೆ.
ಶ್ರೀಹರಿಕೋಟದಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಪ್ಯಾಡ್ನಿಂದ ಬುಧವಾರ ಸಂಜೆ 5 ಗಂಟೆಗೆ ಈ ಆಧುನಿಕ ಸಂವಹನ ಉಪಗ್ರಹದ ಉಡಾವಣೆಯಾಗಲಿದೆ ಎಂದು ಇಸ್ರೊ ಹೇಳಿದೆ. ಇದು ಭಾರವಾದ ಉಡಾವಣಾ ವಾಹಕ ಜಿಎಸ್ಎಲ್ಬಿ ಮಾರ್ಕ್ -3 ನ ಎರಡನೇ ಅಭಿವೃದ್ಧಿ ವಿಮಾನವಾಗಿದೆ.
ಸುಮಾರು ನಾಲ್ಕು ಟನ್ಗಳಷ್ಟು ಭಾರತ ಉಪಗ್ರಹಗಳನ್ನು ಭೂಸ್ಥಾಯೀ ವರ್ಗಾವಣೆ ಕಕ್ಷೆಗೆ ಎತ್ತುವ ಸಾಮರ್ಥ್ಯವನ್ನು ಜಿಎಸ್ಎಲ್ಬಿ ಮಾರ್ಕ್ -3 ಹೊಂದಿದೆ.
ನಾಳೆಯ ಮಿಷನ್ನ ಪ್ಲೇಲೋಡ್ ಜಿಸ್ಯಾಟ್ -29, ಸಂವಹನ ಉಪಗ್ರಹದ ಅಧಿಕ ತ್ರೂಪುಟ್ ಆವೃತ್ತಿಯಾಗಿದೆ. ಇದು 3423 ಕಿಲೋಗ್ರಾಂಗಳಷ್ಟು ದ್ರವ್ಯರಾಶಿಯನ್ನು ಮತ್ತು ಹತ್ತು ವರ್ಷಗಳಿಗಿಂತಲೂ ಹೆಚ್ಚು ಕಾರ್ಯಾಚರಣಾ ಜೀವನವನ್ನು ಹೊಂದಿದೆ.
ಇದು ದೂರದ ಪ್ರದೇಶಗಳಲ್ಲಿ ಭಾರೀ ವೇಗದ ದತ್ತಾಂಶ ಸಂಪರ್ಕವನ್ನು ಹೆಚ್ಚಿಸಲು ಕು ಮತ್ತು ಕಾ ಸ್ಪಾಟ್ ಕಿರಣಗಳನ್ನು ಹೊಂದಿದೆ. ಇತ್ತೀಚಿನ ಅತ್ಯಾಧುನಿಕ ಸಂವಹನ ತಂತ್ರಜ್ಞಾನಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಉಪಗ್ರಹ ಹಲವಾರು ಹೊಸ ತಾಂತ್ರಿಕತೆಗಳ ಪರೀಕ್ಷಾ ವೇದಿಕೆಯಂತೆ ಕಾರ್ಯನಿರ್ವಹಿಸಲಿದೆ.
source: http:www.newsonair.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.