ಸೂರತ್: ದೀಪಾವಳಿ ಸಂದರ್ಭದಲ್ಲಿ ತನ್ನ ಉದ್ಯೋಗಿಗಳಿಗೆ ಬಂಪರ್ ಉಡುಗೊರೆ ನೀಡುವುದಕ್ಕೆ ಫೇಮಸ್ ಆಗಿರುವ ಗುಜರಾತಿನ ಸೂರತ್ ಮೂಲದ ವಜ್ರದ ಉದ್ಯಮಿ ಸಾವ್ಜಿ ಧೋಲಕಿಯ ಅವರು ಈ ಬಾರಿಯೂ ಭರ್ಜರಿ ಉಡುಗೊರೆ ನೀಡಲು ಸಿದ್ದರಾಗಿದ್ದಾರೆ.
ಹರೆ ಕೃಷ್ಣ ಎಕ್ಸ್ಪೋಟ್ರ್ಸ್ ಮಾಲೀಕರಾಗಿರುವ ಧೋಲಕಿಯ ಅವರು, ತಮ್ಮ ಸಂಸ್ಥೆಯ 600 ಉದ್ಯೋಗಿಗಳಿಗೆ ಕಾರುಗಳನ್ನು ದೀಪಾವಳಿ ಗಿಫ್ಟ್ ಆಗಿ ಈ ಬಾರಿ ನೀಡುತ್ತಿದ್ದಾರೆ. ಕೆಲವೊಂದು ಉದ್ಯೋಗಿಗಳಿಗೆ ಅವರು ಆಭರಣ ಹಾಗೂ ಫ್ಲ್ಯಾಟ್ನ್ನು ನೀಡಲಿದ್ದಾರೆ ಎನ್ನಲಾಗಿದೆ.
ಕಳೆದ ಆಗಸ್ಟ್ನಲ್ಲಿ ಅವರು ತಮ್ಮ ಸಂಸ್ಥೆಯಲ್ಲಿ 25 ವರ್ಷಗಳನ್ನು ಪೂರ್ಣಗೊಳಿಸಿದ ಮೂರು ಮಂದಿ ಉದ್ಯೋಗಿಗಳಿಗೆ ರೂ.3 ಕೊಟಿ ಮೌಲ್ಯದ ಮರ್ಸಿಡಿಝ್ ಬೆನ್ಸ್ ಕಾರನ್ನು ಉಡುಗೊರೆ ನೀಡಿದ್ದರು.
ಪ್ರತಿ ದೀಪಾವಳಿಯ ಸಂದರ್ಭದಲ್ಲೂ ಅವರು ತಮ್ಮ ಉದ್ಯೋಗಿಗಳಿಗೆ ಪ್ಲ್ಯಾಟ್, ಕಾರು ಸೇರಿದಂತೆ ದುಬಾರಿ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಈಗಾಗಲೇ ಇಂತಹ ಸಾವಿರಾರು ಕಾರು, ಫ್ಲ್ಯಾಟ್ಗಳನ್ನು ಅವರು ನೀಡಿ ಅತ್ಯಂದ ಉದಾರಿ ಉದ್ಯಮಿ ಎನಿಸಿದ್ದಾರೆ.
ಅಷ್ಟೇ ಅಲ್ಲ ವಿದೇಶದಲ್ಲಿ ವಿದ್ಯೆ ಕಲಿತು ಬಂದ ತಮ್ಮ ಮಗನಿಗೆ ನಿಜವಾದ ಜೀವನ ಹೇಗಿರುತ್ತದೆ ಎಂಬುದನ್ನು ತೋರಿಸಿಕೊಡುವ ಸಲುವಾಗಿ ಕೇರಳದಲ್ಲಿ ಉದ್ಯೋಗ ಮಾಡುವಂತೆ ಮಾಡಿದ್ದಾರೆ.
source: ZEENEWS
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.