ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುರುವಾರದಿಂದ ಭಾರತ ಪ್ರವಾಸ ಹಮ್ಮಿಕೊಳ್ಳಲಿದ್ದು, ಈ ವೇಳೆ ಉಭಯ ದೇಶಗಳ ನಡುವೆ ಎಸ್-400 ಕ್ಷಿಪಣಿ ಖರೀದಿ ಒಪಂದಕ್ಕೆ ಸಹಿ ಬೀಳುವ ನಿರೀಕ್ಷೆ ಇದೆ.
ಭಾರತದೊಂದಿಗೆ ಈ ಒಪ್ಪಂದ ಮಾಡಿಕೊಳ್ಳಲಾಗುತ್ತಿರುವ ಬಗ್ಗೆ ರಷ್ಯಾ ಮೊದಲ ಬಾರಿಗೆ ಅಧಿಕೃತ ಹೇಳಿಕೆಯನ್ನು ಹೊರ ಹಾಕಿದೆ. ಅಕ್ಟೋಬರ್ 5ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಪುಟಿನ್ ನಡುವೆ ದ್ವಿಪಕ್ಷೀಯ ಮಾತುಕತೆ ಜರುಗಲಿದ್ದು, ಈ ವೇಳೆ ಸಹಿ ಬೀಳುವ ನಿರೀಕ್ಷೆ ಇದೆ.
ರಷ್ಯಾದೊಂದಿಗೆ ರಕ್ಷಣಾ ಒಪ್ಪಂದಕ್ಕೊಳಪಟ್ಟರೆ ನಿರ್ಬಂಧ ಹೇರುವುದಾಗಿ ಭಾರತ ಮತ್ತು ಇತರ ಮಿತ್ರ ರಾಷ್ಟ್ರಗಳಿಗೆ ಅಮೆರಿಕಾ ಬೆದರಿಕೆಯೊಡ್ಡುತ್ತಿರುವ ನಡುವೆಯೂ ಭಾರತ ಒಪ್ಪಂದವನ್ನು ಮುಂದುವರೆಸುತ್ತಿರುವುದು ಹಲವಾರು ಕುತೂಹಲಗಳಿಗೆ ಕಾರಣವಾಗಿದೆ.
ಎಸ್-400 ವಾಯು ರಕ್ಷಣಾ ವ್ಯವಸ್ಥೆಯ ಒಪ್ಪಂದದ ಒಟ್ಟು ಮೌಲ್ಯ ಯುಎಸ್ಡಿ 5 ಬಿಲಿಯನ್ ಆಗಿರಲಿದೆ. ಎಸ್-400 ಟ್ರಿಂಫ್, ಸಂಚಾರಿ, ಮೇಲ್ಮೈನಿಂದ ವಾಯು ಮಿಸೈಲ್ ಸಿಸ್ಟಮ್ ಆಗಿದ್ದು, 2015ರಿಂದ ಇದರ ಖರೀದಿಗೆ ಉಭಯ ದೇಶಗಳ ನಡುವೆ ಮಾತುಕತೆ ನಡೆಯುತ್ತಿದೆ.
source; The Indian Express
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.