ಮಂಗಳೂರು : ಎಬಿವಿಪಿ ಮಂಗಳೂರು ಮಹಾನಗರದ ವತಿಯಿಂದ ಬಿಎಂಎಸ್ ಸಭಾಭವನದಲ್ಲಿ ಭಗತ್ಸಿಂಗ್ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಎಬಿವಿಪಿ ಕಾರ್ಯಕರ್ತರು, ಯುನಿವರ್ಸಿಟಿ ಕಾಲೇಜಿನ ವಿದ್ಯಾರ್ಥಿಗಳು ಸೇರಿದ್ದರು. ಭಗತ್ಸಿಂಗ್ರವರ ಭಾವಚಿತ್ರಕ್ಕೆ ಮಂಗಳೂರು ಮಹಾನಗರದ ಸಂಘಟನಾ ಕಾರ್ಯದರ್ಶಿಯಾದ ಕಿರಣ್ ಬೇವಿನಹಳ್ಳಿ ಹಾಗೂ ಕಾಲೇಜಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪುಷ್ಪಾರ್ಚನೆ ಮಾಡಿದರು.
ನಗರ ಸಂಘಟನಾ ಕಾರ್ಯದರ್ಶಿ ಕಿರಣ್ ಬೇವಿನ ಹಳ್ಳಿಯವರು ಕಾರ್ಯಕ್ರಮವನ್ನು ಉದ್ದೇಶಿಸಿ ಭಾರತ ಸ್ವತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಸೇನಾನಿ ಭಗತ್ಸಿಂಗ್ ಬ್ರಿಟೀಷರ ಪಾಲಿಗೆ ಸಿಂಹ ಸ್ವಪ್ನರಾಗಿದ್ದವರು ಪಂಚಾಬಿನ ಬಂಗ ತಾಲೂಕಿನ 1907 ಸಪ್ಟೆಂಬರ್ 28 ರಂದು ಜನಿಸಿದ ಭಗತ್ಸಿಂಗ್ರವರ ತಂದೆ ಕಿಶನ್ ಸಿಂಗ್ ಹಾಗೂ ತಾಯಿ ವಿದ್ಯಾವತಿ. ಭಗತ್ಸಿಂಗ್ ಹುಟ್ಟಿದ ದಿನವೇ ಅವರ ತಂದೆ ಹಾಗೂ ಚಿಕ್ಕಪ್ಪರಾದ ಅಜಿತ್ ಸಿಂಗ್ ಮತ್ತು ಸ್ವರಣ್ ಸಿಂಗ್ ಅವರು ಜೈಲಿನಿಂದ ಬಿಡುಗಡೆಯಾಗಿದ್ದರು. ಭಗತ್ ಮೇಲೆ ಅತೀವ ಪ್ರಭಾವ ಬೀರಿದ್ದವರು ಎಂದರೆ ಅವರ ಚಿಕ್ಕಪ್ಪ ಅಜಿತ್ ಸಿಂಗ್.
ಜಲಿಯನ್ ವಾಲಾಬಾಗ್ನಲ್ಲಿ ಬ್ರಿಟೀಷರು ನಡೆಸಿದ ಮಾರಣ ಹೋಮದಿಂದ ಉಂಟಾದ ರಕ್ತದ ಕೆಂಪು ಕಲೆ ಅವರಲ್ಲಿ ಸ್ವತಂತ್ರ್ಯ ಹೋರಾಟದ ಕಿಚ್ಚನ್ನು ಹಬ್ಬಿಸಿ ಮನಸ್ಸಿನಲ್ಲಿ ಹೋರಾಟದ ಚಿತ್ತಾರ ಮೂಡಿಸಿತು. ಇದೇ ರೀತಿ ಅನೇಕ ಭಗತ್ಸಿಂಗ್ ರವರ ಬಾಲ್ಯದ ನೆನಪನ್ನು ಮಾಡಿಕೊಳ್ಳಲಾಯಿತು. ಅದೇ ರೀತಿ ವಿದ್ಯಾರ್ಥಿಗಳಿಗೆ ಭಾರತ ಮಾತೆಯ ಕೆಲಸಕ್ಕೆ ಪ್ರೇರಣೆಯನ್ನು ನೀಡಿದರು. ವಿದ್ಯಾರ್ಥಿಗಳು ಮಾತನಾಡಿ ಭಗತ್ಸಿಂಗ್ ರವರ ಜಯಂತಿ ಇಂದು ನಮಗೆ ಪ್ರೇರಣೆಯಾಗಿದೆ, ಅನ್ಯಾಯವಾದಲ್ಲಿ ವಿದ್ಯಾರ್ಥಿ ಪರಿಷತ್ ಹೋರಾಟದ ಮೂಲಕ ಪ್ರತಿಭಟನೆಯನ್ನು ಮಾಡಿ ದೇಶದ ಹಿತಕ್ಕಾಗಿ ಶ್ರಮಿಸುತ್ತೇವೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾವಿದ್ಯಾರ್ಥಿ ಪ್ರಮುಖ್ ಬಿಂದು ಗಟ್ಟಿ, ಯುನಿವರ್ಸಿಟಿ ಕಾಲೇಜಿನ ಅಧ್ಯಕ್ಷರಾದ ರಿಷ, ಮಯೂರ್, ಮಹೇಶ್, ಮಣಿಕಂಠ, ಸಂದೇಶ್ ಹಾಗೂ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.