ಬೆಂಗಳೂರು: ಕರ್ನಾಟಕದ ಅರಣ್ಯಗಳಲ್ಲಿ ಸುಮಾರು 2,500 ಚಿರತೆಗಳು ವಾಸಿಸುತ್ತಿವೆ ಎಂಬುದಾಗಿ ವನ್ಯಜೀವಿ ವಿಜ್ಞಾನಿಗಳು ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.
ಕ್ಯಾಮರಾಟ್ರ್ಯಾಪಿಂಗ್ ಮಾದರಿಯನ್ನು ಅನುಸರಿಸಿ ಸುಮಾರು 2012ರಿಂದಲೇ ಅಧ್ಯಯನವನ್ನು ನಡೆಸಲಾಗುತ್ತಿದೆ. ಇದು ಚಿರತೆಗಳ ಸಂಖ್ಯೆಯನ್ನು ಲೆಕ್ಕ ಹಾಕಿದ ದೇಶದ ಮೊತ್ತ ಮೊದಲ ಅಧ್ಯಯನವಾಗಿದೆ.
ಭದ್ರಾವತಿ ಅರಣ್ಯ ವ್ಯಾಪ್ತಿಯ ಕುಕ್ವಾಡಿ-ವುಬ್ರಾನಿ, ಹದಿಕೆರೆ, ಹನ್ನೆ, ರಂಗೈನಗಿರಿಗಳಲ್ಲಿ ಹೆಚ್ಚಿನ ಪ್ರಮಾಣದ ಚಿರತೆಗಳಿವೆ. ಬುಕ್ಕಪಟ್ಣ ಅರಣ್ಯ, ಮುತ್ತುಗದಹಳ್ಳಿ, ಸುವರ್ಣವತಿಗಳಲ್ಲೂ ಉತ್ತಮ ಪ್ರಮಾಣದ ಚಿರತೆಗಳಿವೆ.
ವನ್ಯಜೀವಿ ಶಾಸ್ತ್ರಜ್ಞ ಸಂಜೀವ್ ಗುಬ್ಬಿ ಮತ್ತು ಅವರ ತಂಡ ಈ ಅಧ್ಯಯನ ನಡೆಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.