ನವದೆಹಲಿ: ಆರ್ಗನೈಝೇಶನ್ ಆಫ್ ಇಸ್ಲಾಮಿಕ್ ಕೊಅಪರೇಶನ್(ಒಐಸಿ) ಸಭೆಯಲ್ಲಿ ಕಾಶ್ಮೀರ ವಿಷಯದ ಬಗ್ಗೆ ವಿಷಯ ಪ್ರಸ್ತಾಪ ಮಾಡಿದ ಪಾಕಿಸ್ಥಾನದ ಕ್ರಮವನ್ನು ಭಾರತ ತಿರಸ್ಕರಿಸಿದ್ದು, ಕಾಶ್ಮೀರ ವಿಷಯ ಭಾರತದ ಆಂತರಿಕ ವಿಷಯ ಎಂದು ಸ್ಪಷ್ಟಪಡಿಸಿದೆ.
‘ಒಐಸಿ ಸಭೆಯಲ್ಲಿ ಭಾರತದ ಆಂತರಿಕ ವಿಷಯಗಳು ಚರ್ಚೆಯಾಗಿರುವುದನ್ನು ನಾವು ಖಂಡಿಸುತ್ತೇವೆ, ಭಾರತಕ್ಕೆ ಸಂಬಂಧಿಸಿದ ಯಾವುದೇ ಆಂತರಿಕ ವಿಷಯವನ್ನು ಇಲ್ಲಿ ಚರ್ಚಿಸುವುದನ್ನು ನಾವು ತಿರಸ್ಕರಿಸುತ್ತೇವೆ. ಭಾರತದ ವಿಷಯದ ಬಗ್ಗೆ ಕಮೆಂಟ್ ಮಾಡುವ ಮಾನ್ಯತೆ ಒಐಸಿಗೆ ಇಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲೂ ಪಾಕಿಸ್ಥಾನ ಕಾಶ್ಮೀರದ ವಿಷಯವನ್ನು ಪ್ರಸ್ತಾಪ ಮಾಡಿರುವುದನ್ನು ಭಾರತ ಖಂಡಿಸಿದೆ.
ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟೊಟ್ಟಿಗೆ ಸಾಗಲು ಖಂಡಿತಾ ಸಾಧ್ಯವಿಲ್ಲ ಎಂದು ಪಾಕಿಸ್ಥಾನಕ್ಕೆ ಹಲವಾರು ಬಾರಿ ಮನದಟ್ಟು ಮಾಡಿಕೊಟ್ಟಿರುವ ಭಾರತ, ಉಭಯ ದೇಶಗಳ ನಡುವಿನ ವಿದೇಶಾಂಗ ಸಚಿವರುಗಳ ಮಟ್ಟದ ಮಾತುಕತೆಯನ್ನೂ ಮುರಿದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.