ಗ್ಯಾಲಪ್ ಇಂಟರ್ನ್ಯಾಷನಲ್ ರಿಸರ್ಚ್ ಗ್ರೂಪ್ ನಡೆಸಿದ 2018 ಗ್ಲೋಬಲ್ ಸರ್ವೇ ಹೇಳುವಂತೆ ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರು. ಟ್ವಿಟರ್, ಫೇಸ್ಬುಕ್ನಲ್ಲೂ ಅತ್ಯಧಿಕ ಸಂಖ್ಯೆಯ ಫಾಲೋವರ್ಗಳನ್ನು ಹೊಂದಿರುವ ವಿಶ್ವನಾಯಕ ಎಂಬ ಹೆಗ್ಗಳಿಕೆ ಇವರದ್ದು. ವಿಶ್ವದಾದ್ಯಂತದ ಶ್ರೇಷ್ಠ ಉದ್ಯಮಿಗಳು ಮೋದಿಯವರ ಆಡಳಿತ, ಆರ್ಥಿಕ ನಿರ್ಧಾರ, ತಂತ್ರಗಾರಿಕೆಗಳನ್ನು ಆಗಾಗ ವಿಶ್ಲೇಷಣೆಗೊಳಪಡಿಸುತ್ತಿರುತ್ತಾರೆ.
ಜಗತ್ತಿನ ಟಾಪ್ ಸಿಇಓಗಳು ಮೋದಿ ಬಗ್ಗೆ ಏನು ಹೇಳಿದ್ದಾರೆ ಎಂಬ ಬಗ್ಗೆ ಸಣ್ಣ ನೋಟ ಇಲ್ಲಿದೆ.
ಆನಂದ್ ಮಹೀಂದ್ರ, ಮಹೀಂದ್ರ ಗ್ರೂಪ್ನ ಕಾರ್ಯನಿರ್ವಾಹಕ ಮುಖ್ಯಸ್ಥ
‘ನರೇಂದ್ರ ಮೋದಿಯವರು ಮನಸ್ಥಿತಿಗಳ ಬದಲಾವಣೆಗೆ ಪ್ರಯತ್ನಿಸುತ್ತಿದ್ದಾರೆ ಮತ್ತು ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತಂದಿದ್ದಾರೆ. ನವದೆಹಲಿ ಮತ್ತು ಸರ್ಕಾರದ ಇತರ ಉನ್ನತ ಮಟ್ಟಗಳಲ್ಲಿ ಈಗ ಭ್ರಷ್ಟಾಚಾರ ಎಂಬುದು ಅಸ್ತಿತ್ವದಲ್ಲಿಲ್ಲ’.
(ಫೆಬ್ರವರಿ 2017)
ಅನಿಲ್ ಅಗರ್ವಾಲ್, ವೇದಾಂತ ರಿಸೋಸರ್ಸ್ ಸ್ಥಾಪಕ ಮತ್ತು ಮುಖ್ಯಸ್ಥ
‘ಮೋದಿ ದೇಶವನ್ನು 2 ಟ್ರಿಲಿಯನ್ ಡಾಲರ್ನಿಂದ 20 ಟ್ರಿಲಿಯನ್ ಡಾಲರ್ನತ್ತ ಮತ್ತು ರೆಡ್ ಟೇಪ್ನಿಂದ ರೆಡ್ ಕಾರ್ಪೆಟ್ನತ್ತ ಕೊಂಡೊಯ್ಯುತ್ತಿದ್ದಾರೆ, ಹೀಗಾಗಿ ಜಗತ್ತಿಗೆ ಭಾರತದಲ್ಲಿ ಹೂಡಿಕೆ ಮಾಡಲು ಇದಕ್ಕಿಂತಲೂ ಉತ್ತಮವಾದ ಸಂದರ್ಭ ಸಿಗಲಿಕ್ಕಿಲ್ಲ’.
(ಏಪ್ರಿಲ್ 2017)
ಅನಿಲ್ ಅಂಬಾನಿ, ರಿಲಾಯನ್ಸ್ ಗ್ರೂಪ್ ಮುಖ್ಯಸ್ಥ
’ವರ್ಷದ ಹಿಂದೆ ನಾವು 4ನೇ ’ಡಿ’ಯನ್ನು ಅಳವಡಿಸಿದ್ದೇವೆ. ’ಡಿ’ ಅಂದರೆ ಡಿಸಿಸಿವ್ನೆಸ್ (ನಿರ್ಣಾಯಕತೆ) ಎಂಬುದು ಪ್ರಮುಖವಾಗುತ್ತದೆ. ನರೇಂದ್ರ ಮೋದಿಯವರು ಪ್ರಧಾನಿಯಾಗುತ್ತಿದ್ದಂತೆ ನಾವು ದೇಶದ ಇತಿಹಾಸದಲ್ಲಿ ದೂರದೃಷ್ಟಿತ್ವ ಮತ್ತು ನಿರ್ಣಾಯಕ ನಾಯಕತ್ವದ ಹೊಸ ಯುಗವನ್ನು ಉದ್ಘಾಟನೆಗೊಳಿಸಿದ್ದೇವೆ.’
(ಜುಲೈ 2015)
ದೀಪಕ್ ಪಾರೇಖ್, ಎಚ್ಡಿಎಫ್ಸಿ ಮುಖ್ಯಸ್ಥ
‘ಸ್ಥೂಲ ಆರ್ಥಿಕತೆಯ ದೃಷ್ಟಿಯಲ್ಲಿ ಭಾರತ ಇಂದಿಗಿಂತ ಬಲಿಷ್ಠ ಸ್ಥಿತಿಯನ್ನು ಎಂದೂ ಕಂಡಿಲ್ಲ. ಅಪಾರವಾದ ಪ್ರಗತಿ ಸಂಭಾವ್ಯತೆಯ ಪ್ರದರ್ಶನದಿಂದ ಮತ್ತು ಪ್ರಮುಖ ನೀತಿಗಳಲ್ಲಿ ಬದಲಾವಣೆ ತರುವ, ಕೇಂದ್ರದಲ್ಲಿ ವಿಸ್ತಾರವಾಗಿದ್ದ ಭ್ರಷ್ಟಾಚಾರವನ್ನು ಕಿತ್ತೊಗೆಯುವ ಬಲಿಷ್ಠ ನಾಯಕತ್ವದಿಂದ ಇದು ಸಾಧ್ಯವಾಗಿದೆ.’
(ಆಗಸ್ಟ್ 2016)
ಜಾನ್ ಚೇಂಬರ್ಸ್, ಸಿಸ್ಕೋ ಸಿಸ್ಟಮ್ಸ್ ಮಾಜಿ ಸಿಇಓ
‘ಮೋದಿ ಅತ್ಯಂತ ಧೈರ್ಯಶಾಲಿ. ತನ್ನ ದೇಶದ ಭವಿಷ್ಯದ ಬಗ್ಗೆ ಚಿಂತಿಸುತ್ತಲೇ ಅವರು ಬೆಳಿಗ್ಗೆ ಏಳುತ್ತಾರೆ. ಅವರ ದೃಷ್ಟಿಕೋನವನ್ನು ತಲುಪಲು ಅವಕಾಶ ನೀಡದೇ ಇರುವುದು ಅತ್ಯಂತ ಕಠಿಣವಾಗಿ ಪರಿಣಮಿಸಬಹುದು.’
(ಜುಲೈ 2018)
ಕುಮಾರ್ ಮಂಗಳಂ ಬಿರ್ಲಾ, ಆದಿತ್ಯ ಬಿರ್ಲಾ ಗ್ರೂಪ್ ಮುಖ್ಯಸ್ಥ
’ಡಿಜಿಟಲ್ ಇಂಡಿಯಾ ಎಂಬುದು ಅತ್ಯಂತ ರೋಮಾಂಚಕಾರಿ ಸಾಧ್ಯತೆ. ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ದೃಷ್ಟಿಕೋನವನ್ನು ಸ್ಪಷ್ಟವಾಗಿ ರಚಿಸಿದ್ದಾರೆ, ಅದು ಅವರ ದೃಢತೆ ಮತ್ತು ಭವಿಷ್ಯದ ಚಿಂತನೆಗಳನ್ನು ಪ್ರತಿಫಲಿಸುತ್ತದೆ.’
(ಜುಲೈ 2015)
ಮಾರ್ಕ್ ಜುಕರ್ಬರ್ಗ್, ಫೇಸ್ಬುಕ್ ಸಂಸ್ಥಾಪಕ
‘ಡಿಜಿಟಲ್ ಇಂಡಿಯಾ ಬಗೆಗಿನ ಮೋದಿಯವರ ಬದ್ಧತೆಯನ್ನು ನಾನು ಬಲುವಾಗಿ ಶ್ಲಾಘಿಸುತ್ತೇನೆ. ಪ್ರಗತಿಯನ್ನು ಮುಂದುವರಿಸಲು ಮೋದಿಯಂತಹ ಆನ್ಲೈನ್ ನಾಯಕತ್ವದ ಅಗತ್ಯ ಭಾರತಕ್ಕಿದೆ.’
(ಸೆಪ್ಟೆಂಬರ್ 2015)
ಮುಖೇಶ್ ಅಂಬಾನಿ, ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ
’ನರೇಂದ್ರ ಮೋದಿಯವರಂತಹ ಪ್ರಧಾನಿಯನ್ನು ಪಡೆಯಲು ಭಾರತ ಅದೃಷ್ಟ ಮಾಡಿದೆ, ಅವರು ಕೇವಲ ಸಮಗ್ರ ಮತ್ತು ಸ್ಪಷ್ಟ ದೃಷ್ಟಿಕೋನವನ್ನು ರಚಿಸುವುದು ಮಾತ್ರವಲ್ಲ, ಅದನ್ನು ವಾಸ್ತವಕ್ಕೆ ತರುವ ವೈಯಕ್ತಿಕ ನಾಯಕತ್ವ ಮತ್ತು ಸಾಮರ್ಥ್ಯವನ್ನೂ ಹೊಂದಿದ್ದಾರೆ. ಡಿಜಿಟಲ್ ಇಂಡಿಯಾ ಯೋಜನೆ ಸಮಾಜದ ಎಲ್ಲಾ ವರ್ಗಗಳ ನಡುವೆ ಪಾಲುದಾರಿಕೆಯನ್ನು ಸೃಷ್ಟಿಸಬಲ್ಲದು, ಆ ಪಾಲುದಾರಿಕೆ 1.2 ಬಿಲಿಯನ್ ಭಾರತೀಯರ ಶಕ್ತಿಯನ್ನು ಪ್ರತಿಬಿಂಬಿಸಬಲ್ಲದು.’
(ಜುಲೈ 2015)
ನಾರಾಯಣ ಮೂರ್ತಿ, ಇನ್ಫೋಸಿಸ್ ಸಹ ಸಂಸ್ಥಾಪಕ
‘ಅತ್ಯಂತ ಉತ್ಸಾಹಿ ಮತ್ತು ಶ್ರಮಜೀವಿ ಪ್ರಧಾನಿಯನ್ನು ನಾವು ಹೊಂದಿದ್ದೇವೆ. ಜನರು, ಎಲ್ಲಾ ಪಕ್ಷಗಳು, ಪ್ರತಿಪಕ್ಷಗಳು ಅವರ ಹಿಂದೆ ನಡೆಯಬೇಕು. ಬಹುತೇಕ ಒಳ್ಳೆಯ ಕಾರ್ಯಕ್ರಮಗಳು ಅವರ ನಾಯಕತ್ವದಲ್ಲಿ ನಡೆದಿದೆ ಎಂದು ಭಾವಿಸುತ್ತೇನೆ, ಇನ್ನೂ ಬಹಳಷ್ಟು ಕಾರ್ಯ ನಡೆಯಬೇಕು, ಅದಕ್ಕಾಗಿ ನಾವೆಲ್ಲಾ ಅವರೊಂದಿಗೆ, ಬೆಂಬಲವಾಗಿ ನಿಲ್ಲಬೇಕು. ಸಾಮರ್ಥ್ಯದ ಅರಿವಿನೊಂದಿಗೆ ನಾವು ಕಾರ್ಯ ಮಾಡಿದಾಗ ಪ್ರಗತಿ ಖಂಡಿತ ಸಾಧ್ಯವಾಗುತ್ತದೆ.’
(ಮೇ 2015)
ಪೌಲ್ ಜಾಕೋಬ್ಸ್, ಕ್ವಾಲ್ಕಾಮ್ನ ಮಾಜಿ ಕಾರ್ಯನಿರ್ವಾಹಕ ಮುಖ್ಯಸ್ಥ
‘ಭಾರತವನ್ನು ಡಿಜಿಟಲ್ ಸಬಲೀಕರಣ ಸಮಾಜ ಮತ್ತು ಜ್ಞಾನ ಕೇಂದ್ರಿತ ಆರ್ಥಿಕತೆಯನ್ನಾಗಿ ಪರಿವರ್ತಿಸುವ ಸಲುವಾಗಿ ನಾವು ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನಗಳನ್ನು ಹಂಚಿಕೊಳ್ಳುತ್ತೇವೆ.’
(ಸೆಪ್ಟೆಂಬರ್ 2015)
ಪೌಲ್ ಪೋಲ್ಮೆನ್, ಯುನಿಲಿವರ್ ಸಿಇಓ
’ನಾನು ರಾಜಕೀಯಕ್ಕಿಳಿಯಲು ಇಚ್ಛಿಸುವುದಿಲ್ಲ. ಆದರೂ ಪ್ರಧಾನಿ ನರೇಂದ್ರ ಮೋದಿಯವರು ಮಾಡಲು ಪ್ರಯತ್ನಿಸುತ್ತಿರುವುದರಲ್ಲಿ ಎರಡು ವಿಷಯವಿದೆ. ಒಂದು ಬೃಹತ್ ಭಾರತ ಮತ್ತೊಂದು ಸ್ಮಾರ್ಟ್ ಭಾರತ. ಸ್ವಚ್ಛ ಭಾರತ ಮತ್ತು ಮೇಡ್ ಇನ್ ಇಂಡಿಯಾವೂ ಸೇರಿದೆ. ಇದು ಅತೀದೊಡ್ಡ ಘೋಷಣೆಗಳಾಗಿವೆ, ಇದಕ್ಕೆ ಅವರೇ ಜವಾಬ್ದಾರರಾಗಿರುತ್ತಾರೆ, ತಮ್ಮ ಗುರಿಯನ್ನು ಅವರೇ ಅತ್ಯಂತ ಎತ್ತರದಲ್ಲಿಟ್ಟಿದ್ದಾರೆ. ಈಗಿರುವ ಪ್ರಶ್ನೆ, ಎಷ್ಟು ವೇಗದಲ್ಲಿ ಅವರು ದೇಶವನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ ಎಂಬುದು. ಅವರು ಮಾಡಲು ಪ್ರಯತ್ನಿಸುತ್ತಿರುವುದರಲ್ಲಿ ಆರ್ಥಿಕತೆಗೆ ಪೂರಕವಾದ ಮತ್ತು ಪ್ರಯೋಜನ ತರುವ ಅಂಶಗಳಿವೆ. ಈ ಯೋಜನೆಗಳಿಗೆ ನಾವು ಬೆಂಬಲ ನೀಡುತ್ತೇವೆ, ಯಾಕೆಂದರೆ ಅದರಿಂದ ನಮಗೆ ಪ್ರಯೋಜನವಿದೆ.’
(ಸೆಪ್ಟೆಂಬರ್ 2017)
ಪೀಟರ್ ಆರ್. ಹಂಟ್ಸ್ಮನ್, ಹಂಟ್ಸ್ಮನ್ ಕಾರ್ಪೋರೇಶನ್ ಸಿಇಓ
’ಅಮೆರಿಕಾದಲ್ಲಿರುವ ನಮ್ಮಂತಹ ಅನೇಕರು ನರೇಂದ್ರ ಮೋದಿಯವರು ನಮ್ಮ ದೇಶದಲ್ಲಿದ್ದು, ಅದರ ನಾಯಕತ್ವವನ್ನು ತೆಗೆದುಕೊಳ್ಳಲಿ ಎಂದು ಬಯಸುತ್ತಿದ್ದೇವೆ.’
(ಜನವರಿ 2017)
ಪ್ರೇಮ್ ವಾಟ್ಸಾ, ಫೇರ್ಫ್ಯಾಕ್ಸ್ ಫೈನಾನ್ಶಿಯಲ್ ಹೋಲ್ಡಿಂಗ್ಸ್
’ಮೋದಿಯವರು ಉದ್ಯಮ ಸ್ನೇಹಿಯಾಗಿದ್ದಾರೆ ಮತ್ತು ಅವರಿಗೆ ಉತ್ತಮ ಟ್ರ್ಯಾಕ್ ರೆಕಾರ್ಡ್ ಕೂಡ ಇದೆ. 2014 ರ ಚುನಾವಣೆಯ ಬಳಿಕ ಭಾರತದ ರಾಜಕೀಯ ವಾತಾವರಣ ಬದಲಾಗಿದೆ.’
(ಮೇ 2018)
ರಾಹುಲ್ ಬಜಾಜ್, ಬಜಾಜ್ ಗ್ರೂಪ್
’ಕಪಟ ಬಂಡವಾಳಶಾಹಿ ಮೋದಿಯವರ ಆಡಳಿತದಲ್ಲಿ ಬೆಳೆಯಲಾರದು ಎಂದು ನಾನು ಹೇಳಬಲ್ಲೆ, ಅವರು ಸ್ವಚ್ಛ ವ್ಯಕ್ತಿಯಾಗಿದ್ದು, ಸರ್ಕಾರದ ಕ್ಲೀನ್ ಇಮೇಜ್ನ್ನು ಕಾಪಾಡಲು ಬಯಸುತ್ತಾರೆ. ಅವರು ವಿಶ್ವಾಸದ್ರೋಹಿ ಅಲ್ಲ. ಕಾನೂನು ರೀತಿಯಲ್ಲೇ ಚುನಾವಣೆಯಲ್ಲಿ ತನಗೆ ಬೆಂಬಲವಿತ್ತವರಿಗೆ ಪುರಸ್ಕಾರ ನೀಡುತ್ತಾರೆ.’
(ಏಪ್ರಿಲ್ 2015)
ರಂಜನ್ ಆನಂದನ್, ಗೂಗಲ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ
’ಮೋದಿಗೆ ಅಪಾರವಾದ ಶಕ್ತಿಯಿದೆ. ಅವರು ಏನು ತಿನ್ನುತ್ತಾರೆ, ಉಣ್ಣುತ್ತಾರೆ ಎಂಬುದು ನನಗೆ ತಿಳಿದಿಲ್ಲ, ಅವರೊಂದಿಗೆ ಸಾಕಷ್ಟು ಸಮಯವನ್ನು ನಾನು ಕಳೆದಿದ್ದೇನೆ, ತಂತ್ರಜ್ಞಾನದ ಕುರಿತು ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಾರೆ. ಒಂದೇ ಒಂದು ಬಾರಿಯೂ ಅವರು ಆಕಳಿಸಿದ್ದನ್ನು, ಬೋರ್ ಆಗಿದ್ದನ್ನು ನಾನು ಕಂಡಿಲ್ಲ.’
(ಅಕ್ಟೋಬರ್ 2015)
ರಾಜೀವ್ ಬಜಾಜ್, ಬಜಾಜ್ ಆಟೋ ವ್ಯವಸ್ಥಾಪಕ ನಿರ್ದೇಶಕ
’ಯೋಚನೆಗಳು ಮತ್ತು ಪರಿಹಾರಗಳು ಸರಿಯಾಗಿದ್ದರೂ ಅದು ಬೆಣ್ಣೆ ಮೇಲಿಟ್ಟ ಚಾಕುವಿನಂತೆ ಇರುತ್ತದೆ. ಒಂದು ವೇಳೆ ಯೋಚನೆ ಸರಿಯಾಗಿದಿದ್ದರೆ ಅದರ ಅನುಷ್ಠಾನವನ್ನು ತೆಗಳಬಾರದು. ನಮ್ಮ ಯೋಚನೆಯ ಬಗ್ಗೆ ಚಿಂತನೆ ನಡೆಸಬೇಕು.’
(ಫೆಬ್ರವರಿ 2017)
ರತನ್ ಟಾಟಾ, ಟಾಟಾ ಸಂಸ್ಥೆ ಮುಖ್ಯಸ್ಥ
’ಪ್ರಧಾನಿಯಾಗಿ ಮೋದಿ ನವ ಭಾರತವನ್ನು ಭಾರತೀಯರಿಗೆ ನೀಡುತ್ತಿದ್ದಾರೆ. ನವ ಭಾರತ ನೀಡಲು ಅವರಿಗೆ ನಾವು ಅವಕಾಶವನ್ನು ಒದಗಿಸಬೇಕು. ಭಾರತವನ್ನು ತಾಜಾಗೊಳಿಸುವ ಸಾಮರ್ಥ್ಯ, ಶಕ್ತಿ ಅವರಿಗಿದೆ, ಅವರ ನಾಯಕತ್ವದ ಬಗ್ಗೆ ನನಗೆ ಆಶಾದಾಯಕ ಧೋರಣೆಯಿದೆ, ಅವರು ನೀಡಿದ ಭರವಸೆಯಂತೆ ಭಾರತ ನವ ಭಾರತವಾಗಲಿದೆ.’
(ಸೆಪ್ಟೆಂಬರ್ 2017)
ಸತ್ಯಾ ನಡೆಲ್ಲಾ, ಮೈಕ್ರೋಸಾಫ್ಟ್ ಕಾರ್ಪೊರೇಶನ್ ಸಿಇಓ
’ಭಾರತ ವಿಶ್ವದರ್ಜೆಯ ಉದ್ಯಮಶೀಲರ ಮತ್ತು ಮಾನವ ಬಂಡವಾಳದ ರಾಜಧಾನಿ. ಪ್ರಧಾನಿಯವರ ದೃಷ್ಟಿಕೋನ ಅದ್ಭುತವಾಗಿದೆ, ಮಾನವನ ಚತುರತೆಯನ್ನು ಪ್ರೇರೇಪಿಸಲು ತಂತ್ರಜ್ಞಾನ ಹೇಗೆ ಸಾಧನವಾಗಬಲ್ಲದು ಎಂಬುದನ್ನು ಅವರು ಅರಿತಿದ್ದಾರೆ.’
(ಸೆಪ್ಟೆಂಬರ್ 2015)
ಸುನೀಲ್ ಮಿತ್ತಲ್, ಭಾರ್ತಿ ಎಂಟರ್ಪ್ರೈಸಸ್ ಸಂಸ್ಥಾಪಕ ಹಾಗೂ ಮುಖ್ಯಸ್ಥ
’ಮೋದಿಗೆ ತಂತ್ರಜ್ಞಾನದ ಶಕ್ತಿಯ ಅರಿವಿದೆ, ಭಾರತವನ್ನು ಅದು ಹೇಗೆ ಬದಲಾಯಿಸಬಲ್ಲದು ಎಂಬುದರ ಜ್ಞಾನವಿದೆ. ಅದು ಭಾರತದ ಉದ್ದಗಲವನ್ನು ಕಡಿಮೆ ಅವಧಿಯಲ್ಲಿ ಹೇಗೆ ಸಂಪರ್ಕಿಸಬಹುದು ಎಂಬುದರ ಅರಿವಿದೆ. ಅವರು ಡಿಜಿಟಲ್ ಇಂಡಿಯಾವನ್ನು ತಮ್ಮ ಪ್ರಮುಖ ಯೋಜನೆಯಾಗಿ ಕೈಗೆತ್ತಿಕೊಂಡಿದ್ದು ನಮ್ಮ ಪುಣ್ಯ.’
(ಜುಲೈ 2015)
ವಿಜಯ್ ಶರ್ಮಾ, ಪೇಟಿಎಂ ಸಂಸ್ಥಾಪಕ ಮತ್ತು ಮುಖ್ಯಸ್ಥ
’ಇಂದು ನೀವು ಭಾರತವನ್ನು ನೋಡಿದರೆ, ಇಲ್ಲಿ ಅವಕಾಶಗಳು ಸಾಕಷ್ಟಿರುವುದು ಗೋಚರಿಸುತ್ತದೆ. ಮೋದಿ ಪ್ರಧಾನಿಯಾಗುವುದಕ್ಕೂ ಮೊದಲು ಭಾರತದ ಆರ್ಥಿಕ ಪ್ರಗತಿ ಶೇ.5ಕ್ಕಿಂತಲೂ ಕೆಳಮಟ್ಟದಲ್ಲಿ ಇತ್ತು. ಭ್ರಷ್ಟಾಚಾರವನ್ನು ಸಾಕಷ್ಟು ಕಡಿಮೆಗೊಳಿಸಿದ್ದಾರೆ, ಅವರು ಉದ್ಯಮ ಸ್ನೇಹಿ, ಗ್ರಾಹಕ ಸ್ನೇಹಿ ಆರ್ಥಿಕತೆಯನ್ನು ತಂದಿದ್ದಾರೆ.’
(ಜನವರಿ 2018)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.