ನವದೆಹಲಿ: ಕಾಶ್ಮೀರ ವಿಷಯದಲ್ಲಿ ಭಾರತದ ವಿರುದ್ಧ ಪಿತೂರಿ ಹೆಣೆಯುವ ಕಾರ್ಯವನ್ನು ನವದೆಹಲಿಯಲ್ಲಿನ ಪಾಕಿಸ್ಥಾನ ಹೈಕಮಿಷನ್ ಒಳಗಡೆಯೇ ನಡೆಸಲಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಪೊಲೀಸ್ ವಶದಲ್ಲಿರುವ ಪ್ರತ್ಯೇಕತಾವಾದಿ ಆಸಿಯಾ ಅಂದ್ರಾಬಿ ಬಾಯ್ಬಿಟ್ಟಿದ್ದಾಳೆ.
2015ರಲ್ಲಿ ತನ್ನ ತಾಯಿ ಸತ್ತಾಗ ಪಾಕ್ ಪ್ರಧಾನಿಯಾಗಿದ್ದ ನವಾಝ್ ಶರೀಫ್ ನನಗೆ ಸಂತಾಪ ಸೂಚಿಸಿ ಪತ್ರ ಬರೆದಿದ್ದರು, ನಾನು ಕೂಡ ಅವರಿಗೆ ಕಾಶ್ಮೀರ ವಿಷಯದಲ್ಲಿ ಪಾಕಿಸ್ಥಾನ ಗಂಭೀರವಾಗಿ ವರ್ತಿಸುತ್ತಿಲ್ಲ ಎಂದು ದೂರಿ ಪತ್ರವನ್ನು ಬರೆದಿದ್ದೆ ಎಂಬುದಾಗಿ ಅಂದ್ರಾಬಿ ಹೇಳಿದ್ದಾಳೆ ಎನ್ನಲಾಗಿದೆ.
ಸೈಯದ್ ಅಲಿ ಶಾ ಗಿಲಾನಿ, ಮಿರ್ವೇಝ್ ಉಮರ್ ಫಾರೂಖ್ ಮುಂತಾದ ಪ್ರತ್ಯೇಕತಾವಾದಿಗಳು ಪಾಕಿಸ್ಥಾನದೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ. ಪಾಕ್ನ ಸೈಯದ್ ಹಫೀಜ್ ಮುಂತಾದ ನಾಯಕರೊಂದಿಗೆ ನಿರಂತರವಾಗಿ ದೂರವಾಣಿ ಸಂಭಾಷಣೆ ಜರುಗುತ್ತದೆ ಎಂಬಿತ್ಯಾದಿ ಮಾಹಿತಿಗಳನ್ನು ಈಕೆ ನೀಡಿದ್ದಾಳೆ.
ದೆಹಲಿಯಲ್ಲಿನ ಪಾಕಿಸ್ಥಾನ ಹೈಕಮಿಷನರ್ ಸೈಯದ್ ಹೈದರ್ ಈಕೆಗೆ ಅತ್ಯಂತ ಆಪ್ತನಾಗಿದ್ದು, ಅವರ ದೂರವಾಣಿ ಸಂಖ್ಯೆಯನ್ನು ಈಕೆ ’ಬೇಟ ಹೈದರ್’ ಎಂದು ಸೇವ್ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.