ನವದೆಹಲಿ: ಎಲ್ಲರನ್ನೂ ಒಳಗೊಂಡ ಹೊಸ ಭಾರತದ ಪರಿಕಲ್ಪನೆಯ ಸಾಕಾರಕ್ಕಾಗಿ ನಾವು ಮಕ್ಕಳ ಶಿಕ್ಷಣದತ್ತ ಹೆಚ್ಚು ಗಮನವನ್ನು ಹರಿಸಬೇಕು ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯಿಸಿದ್ದಾರೆ.
ಭಾರತೀಯ ವಯಸ್ಕ ಶಿಕ್ಷಣ ಮಂಡಳಿ ಕೊಡಲ್ಪಡುವ ನೆಹರೂ ಮತ್ತು ಟ್ಯಾಗೋರ್ ಸಾಹಿತ್ಯ ಪುರಸ್ಕಾರವನ್ನು ಪ್ರದಾನ ಮಾಡಿ ಅವರು ಮಾತನಾಡಿದರು.
ಶಿಕ್ಷಣದ ಬಗ್ಗೆ ನಾವು ಮರು ಚಿಂತನೆ ಮಾಡುವ ಅಗತ್ಯವಿದೆ. ಯಾವುದನ್ನು ಕಲಿಸಬೇಕು, ಹೇಗೆ ಕಲಿಸಬೇಕು ಎಂಬ ಬಗ್ಗೆ ವಿಮರ್ಶೆ ನಡೆಸಬೇಕು, ಶಾಲೆಗಳು ಮತ್ತು ಕಾಲೇಜುಗಳು ಕ್ರಿಯಾತ್ಮಕವಾಗಿ ಸುಧಾರಣೆಗೊಳ್ಳಬೇಕು, ಮಕ್ಕಳು ಸಂತೋಷದಿಂದ ಭಾಗವಹಿಸುವಂತಹ ಕಲಿಕಾ ಸ್ಥಳ ನಿರ್ಮಾಣಗೊಳ್ಳಬೇಕು ಎಂದಿದ್ದಾರೆ.
ಸಾಕ್ಷರತೆ ಸಮಾಜದೊಂದಿಗೆ ಬೆರೆಯಲು ಹೆಚ್ಚು ಸ್ವಾತಂತ್ರ್ಯವನ್ನು ನೀಡುತ್ತದೆ, ಉತ್ತಮ ಕಲಿಕೆ ಮತ್ತು ಆದಾಯ ಗಳಿಸುವ ಅವಕಾಶವನ್ನು ನೀಡುತ್ತದೆ ಎಂದಿದ್ದಾರೆ.
ಸ್ವಾತಂತ್ರ್ಯ ಸಿಕ್ಕಾಗ ಭಾರತದ ಸಾಕ್ಷರತೆ ಪುರುಷರಲ್ಲಿ ಶೇ.14ರಷ್ಟು, ಮಹಿಳೆಯರಲ್ಲಿ ಶೇ.8ರಷ್ಟು ಮಾತ್ರ ಇತ್ತು, ಪ್ರಸ್ತುತ ಶೇ.73ರಷ್ಟಕ್ಕೆ ತಲುಪಿದ್ದೇವೆ, ಈ ನಿಟ್ಟಿನಲ್ಲಿ ನಡೆದ ಎಲ್ಲಾ ಪ್ರಯತ್ನಗಳಿಗೂ ನಾವು ಆಭಾರಿಗಳು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.