ನವದೆಹಲಿ: ಕೆಲ ವರ್ಷಗಳಿಂದ ಭಾರತ ಕ್ರಿಕೆಟ್ ಬಿಟ್ಟು ಇತರ ಕ್ರೀಡೆಗಳತ್ತವೂ ಒಲವು ತೋರಿಸಲು ಆರಂಭಿಸಿದೆ. ಶೂಟಿಂಗ್, ರೇಸಿಂಗ್, ಸ್ವಿಮ್ಮಿಂಗ್, ಸಾಹಸ ಕ್ರೀಡೆ ಇತ್ಯಾದಿಗಳಲ್ಲಿ ಯುವಜನತೆ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿದೆ. ಪ್ರತಿಭಾವಂತರು ಈ ಕ್ರೀಡೆಗಳಲ್ಲಿ ಬೆಳೆಯುತ್ತಿದ್ದಾರೆ.
ಅಂತಹ ಒಂದು ಅಪರೂಪದ ಪ್ರತಿಭೆಯೆಂದರೆ 13 ವರ್ಷದ ಮೊಟೊಕ್ರಾಸ್ ಪ್ರಾಡಿಜಿ, ಯುವರಾಜ್ ಕೊಂದೆ ದೇಶಮುಖ್. ಆಗಷ್ಟ್ನಲ್ಲಿ ಇವರು ಆಸ್ಟೇಲಿಯಾದಲ್ಲಿ ನಡೆಯಲಿರುವ ವರ್ಲ್ಡ್ ಮೊಟೊಕ್ರಾಸ್ ಚಾಂಪಿಯನ್ಶಿಪ್ ಜೂನಿಯರ್ಸ್ನಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ ಇದರಲ್ಲಿ ಭಾಗಿಯಾಗುತ್ತಿರುಬ ಅತೀ ಕಿರಿಯ ಭಾರತೀಯ ಎನಿಸಲಿದ್ದಾರೆ.
ಕೇವಲ ಮೂರವರೆ ವರ್ಷದವನಿದ್ದಾಗಲೇ ರೈಡಿಂಗ್ ಕಲಿತಿದ್ದ ಯುವರಾಜ್, 9ನೇ ವಯಸ್ಸಿಗೆ ರೇಸಿಂಗ್ನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಆರಂಭಿಸಿದನು. 2014ರಲ್ಲಿ ದುಬೈ ಮೊಟೊಕ್ರಾಸ್ ಚಾಂಪಿಯನ್ಶಿಪ್, 2017ರಲ್ಲಿ ಎಂಆರ್ಎಫ್ ಇಂಡಿಯಾ ಸೂಪರ್ಕ್ರಾಸ್. ಯುಎಸ್ ಎಎಂಎ ರೇಸಸ್ನ್ನು ಈತ ಗೆದ್ದುಕೊಂಡಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.