ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ದೇಶದ ಮೊದಲ ಪ್ರಜೆಯಾಗಿ ಒಂದು ವರ್ಷದ ಅಧಿಕಾರವನ್ನು ಪೂರೈಸಿದ್ದಾರೆ. ಈ ಒಂದು ವರ್ಷದ ಅವಧಿಯಲ್ಲಿ ಅವರು 29 ರಾಜ್ಯಗಳ ಪೈಕಿ 27 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ.
2017ರ ಜುಲೈ 25ರಂದು ಕೋವಿಂದ್ ರಾಷ್ಟ್ರಪತಿಯಾಗಿ ಅಧಿಕಾರವಹಿಸಿಕೊಂಡರು, 2017 ಆಗಸ್ಟ್ನಲ್ಲಿ ಜಮ್ಮು ಕಾಶ್ಮೀರದ ಲೇಹ್ಗೆ ರಾಷ್ಟ್ರಪತಿಯಾಗಿ ಮೊತ್ತ ಮೊದಲ ಭೇಟಿ ನೀಡಿದರು. ಒಟ್ಟಾರೆಯಾಗಿ 52 ವಾರಗಳಲ್ಲಿ ಅವರು 53 ದೇಶೀಯ ಭೇಟಿಗಳನ್ನು ನೀಡಿದ್ದಾರೆ. ಪ್ರಣವ್ ಮುಖರ್ಜಿ ಅವರು 52 ವಾರಗಳಲ್ಲಿ 42 ಭೇಟಿಗಳನ್ನು ನೀಡಿದ್ದರು. 2017ರ ನವೆಂಬರ್ನಲ್ಲಿ ಕೋವಿಂದ್ 12 ರಾಜ್ಯಗಳಿಗೆ ಭೇಟಿಕೊಟ್ಟಿದ್ದರು.
ಉತ್ತರಪ್ರದೇಶಕ್ಕೆ ಅವರು ಅತೀಹೆಚ್ಚು ಬಾರಿ ಭೇಟಿ ನೀಡಿದ್ದಾರೆ, ಬಳಿಕ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಕ್ಕೆ ತಲಾ 5 ಬಾರಿ ಭೇಟಿ ನೀಡಿದ್ದಾರೆ. ಗುಜರಾತ್ ಗೆ 4 ಬಾರಿ, ಜಮ್ಮ ಕಾಶ್ಮೀರಕ್ಕೆ 3 ಬಾರಿ, ಕರ್ನಾಟಕಕ್ಕೆ 3 ಬಾರಿ ಭೇಟಿಕೊಟ್ಟಿದ್ದಾರೆ.
ಈಶಾನ್ಯಭಾಗದ 8 ರಾಜ್ಯಗಳ ಪೈಕಿ ಅವರು 6 ರಾಜ್ಯಗಳಿಗೆ ಭೇಟಿಕೊಟ್ಟಿದ್ದಾರೆ. ಇದು ಇತರ ರಾಷ್ಟ್ರಪತಿಗಳಿಗೆ ಹೋಲಿಸಿದರೆ ಒಂದು ವರ್ಷದಲ್ಲಿ ಅವರು ಮಾಡಿದ ದಾಖಲೆಯೇ ಆಗಿದೆ.
ಒಂದು ವರ್ಷದಲ್ಲಿ 10 ರಾಷ್ಟ್ರಗಳಿಗೂ ಅವರು ಭೇಟಿಕೊಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.