ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಉಪಗ್ರಹ ಉಡಾವಣಾ ವಾಹಕ(ರಾಕೆಟ್)ಗಳಿಗೆ ಶಕ್ತಿ ತುಂಬುವ ವಿಕಾಸ್ ಎಂಜಿನ್ನನ್ನು ಸುಧಾರಣೆಗೊಳಿಸಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಅದರ ಮೂರು ಉಪಗ್ರಹ ಉಡಾವಣಾ ವಾಹಕಗಳ ಸ್ಪೇಸ್ಕ್ರಾಫ್ಟ್ ಲಿಫ್ಟಿಂಗ್ ಸಾಮರ್ಥ್ಯಕ್ಕೆ ಹೆಚ್ಚಿನ ಶಕ್ತಿ ಸೇರ್ಪಡೆಯಾಗಲಿದೆ.
ಹೈ-ಥ್ರಸ್ಟ್ ವಿಕಾಸ್ ಎಂಜಿನನ್ನು ಭಾನುವಾರ 3 ನಿಮಿಷಗಳ ಕಾಲ ಗ್ರೌಂಡ್ ಟೆಸ್ಟಿಂಗ್ಗೆ ಒಳಪಟ್ಟು ತನ್ನ ಅರ್ಹತೆಯನ್ನು ಸಾಬೀತು ಮಾಡಿದೆ ಎಂದು ಇಸ್ರೋ ತಿಳಿಸಿದೆ.
ವಿಕಾಸ್ ಎಂಜಿನ್ ಸುಧಾರಣೆಯಿಂದಾಗಿ ಇನ್ನು ಮುಂದೆ ಇಸ್ರೋ ತನ್ನ ಜಿಎಸ್ಎಲ್ವಿ-ಮಾರ್ಕ್ 111 ಲಾಂಚರ್ ಮೂಲಕ 4 ಸಾವಿರ ಕೆಜಿ ತೂಕದ ಸೆಟ್ಲೈಟ್ನ್ನು ಸ್ಪೇಸ್ಗೆ ಕಳುಹಿಸಬಹುದಾಗಿದೆ.
ಅಲ್ಲದೇ ಇದು ಪಿಎಸ್ಎಲ್ವಿ, ಜಿಎಸ್ಎಲ್ವಿ, ಜಿಎಸ್ಎಲ್ವಿ ಎಂಕೆ-111 ಉಡಾವಣಾ ವಾಹಕಗಳ ಪೇಲೋಡ್ ಸಾಮರ್ಥ್ಯವನ್ನು ಹೆಚ್ಚಳ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.