ಸುಳ್ಯ: ಶಿಕ್ಷಣವೇ ಮನುಷ್ಯನಲ್ಲಿ ಎಲ್ಲಾ ರೀತಿಯ ಪರಿವರ್ತನೆ ಮಾಡುವುದಿಲ್ಲ. ಮಾನವಿಯತೆಯ ಮೌಲ್ಯಗಳ ಶಿಕ್ಷಣದ ಜೊತೆಗೆ ಜ್ಞಾನ ವಿಕಾಸವೂ ಉಂಟಾಗಿ ಆ ಮೂಲಕ ವ್ಯಕ್ತಿತ್ವದ ಪರಿವರ್ತನೆಯ ಅಗತ್ಯ ಇದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು. ಯುವ ಜನಾಂಗದ ಸದ್ವಿನಿಯೋಗಕ್ಕೆ ರಾಷ್ಟ್ರ ಬಿಂಬಿತ ಕಾರ್ಯಕ್ರಮಗಳ ಅಗತ್ಯ ಇದೆ. ಆ ಮೂಲಕ ಯುವಜನತೆಯನ್ನು ರಾಷ್ಟ್ರಕ್ಕೆ ಸಮರ್ಪಿಸುವ ಕಾರ್ಯ ಆಗಬೇಕಿದೆ. ೬೦ ಶೇ. ಯುವಜನರೇ ತುಂಬಿರುವ ದೇಶಕ್ಕೆ ಭವಿಷ್ಯ ಇರುವುದು ಯುವ ಸಮೂಹದಿಂದ ಮಾತ್ರ ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಮೀರಾ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಸ್. ಅಂಗಾರ, ಮಂಗಳೂರು ಸರ್ಕಾರಿ ಪ್ರಥಮ ದರ್ಜೇ ಕಾಲೇಜಿನ ಪ್ರಾಂಶುಪಾ ಡಾ.ರಾಧಾಕೃಷ್ಣ, ವಿಧ್ಯಾರ್ಥಿ ಕ್ಷೇಮಪಾಲನಾಧಿಕಾರಿ ಕೆ. ಪದ್ಮನಾಭ, ಲಲಿತ ಕಲಾ ಸಂಘದ ಸಂಚಾಲಕ ಡಾ. ಪೂವಪ್ಪ ಕಣಿಯೂರು, ಸಹಕಾರ್ಯದರ್ಶಿ ಆನಂದ.ಕೆ, ಅಶ್ವಿನಿ ಉಪಸ್ಥಿತರಿದ್ದರು. ಡಾ. ಪೂವಪ್ಪ ಕಣಿಯೂರು ಸ್ವಾಗತಿಸಿ. ಉಪನ್ಯಾಸಕ ಅಚ್ಚುತ್ತ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.