ಬೆಂಗಳೂರು: ವಿಶ್ವದ ಅತೀ ಇನ್ನೋವೇಟಿವ್ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 57ನೇ ಸ್ಥಾನ ದೊರೆತಿದೆ. ಕಳೆದ ವರ್ಷ 60ನೇ ಸ್ಥಾನದಲ್ಲಿದ್ದ ನಮ್ಮ ದೇಶ ಈ ಬಾರಿ 3 ಸ್ಥಾನಗಳ ಸುಧಾರಣೆ ಕಂಡಿದೆ.
ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್(ಜಿಐಐ) ಈ ರ್ಯಾಂಕಿಂಗ್ನ್ನು ನೀಡಿದ್ದು, 80 ಸೂಚಕಗಳನ್ನು ಪರಿಗಣಿಸಿ 126 ದೇಶಗಳಿಗೆ ರ್ಯಾಂಕಿಂಗ್ ನೀಡಿದೆ. ಸ್ವಿಟ್ಜರ್ಲ್ಯಾಂಡ್ ಮೊದಲ ಸ್ಥಾನ, ನೆದರ್ಲ್ಯಾಂಡ್ ಎರಡನೇ ಸ್ಥಾನ, ಸ್ವೀಡನ್ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. 6ನೇ ಸ್ಥಾನದಲ್ಲಿ ಅಮೆರಿಕಾ ಇದೆ.
ಕಳೆದ ನಾಲ್ಕು ವರ್ಷದಿಂದ ಭಾರತ ಈ ರ್ಯಾಂಕಿಂಗ್ನಲ್ಲಿ ಕ್ಷಿಪ್ರ ಸುಧಾರಣೆಗಳನ್ನು ಕಾಣುತ್ತಿದೆ. 2015ರಲ್ಲಿ 81ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ 57ನೇ ಸ್ಥಾನದಲ್ಲಿರುವುದು ಮಹತ್ವದ ಸುಧಾರಣೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.