ಉಧಮ್ಪುರ: ಯಾರ ಸಹಾಯವೂ ಇಲ್ಲದೆ ಒಬ್ಬಳೇ ಶೌಚಾಲಯವನ್ನು ನಿರ್ಮಾಣ ಮಾಡಿ, ಈ ಮೂಲಕ ತನ್ನ ಊರಿನವರಿಗೂ ಶೌಚಾಲಯ ನಿರ್ಮಾಣ ಮಾಡುವಂತೆ ಪ್ರೇರಣೆ ನೀಡಿದ ಜಮ್ಮು ಕಾಶ್ಮೀರದ ಉಧಮ್ಪುರದ 87 ವರ್ಷ ಮಹಿಳೆ ಅಲ್ಲಿನ ಜಿಲ್ಲಾಡಳಿತದಿಂದ ಸನ್ಮಾನಿತಳಾಗಿದ್ದಾರೆ.
ಉಧಂಪುರದ ಬದಲಿ ಗ್ರಾಮದವರಾದ ರಾಕ್ಕಿ ಅವರಿಗೆ ಉಪಜಿಲ್ಲಾಧಿಕಾರಿಯವರು ರೂ. 12 ಸಾವಿರದ ಚೆಕ್ ನೀಡಿ ಸನ್ಮಾನಿಸಿದ್ದಾರೆ.
ಜಿಲ್ಲಾಡಳಿತ ರೂಪಿಸಿದ್ದ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಿತರಾದ ರಾಕ್ಕಿ ಅವರಿಗೆ ತನ್ನ ಮನೆಯಲ್ಲೂ ಶೌಚಾಲಯ ನಿರ್ಮಾಣ ಮಾಡಬೇಕೆಂಬ ಆಶಯ ಮೂಡಿತು. ಆದರೆ ಕೂಲಿ ಕೆಲಸ ಮಾಡಿ ಜೀವನ ನಡೆಸುವ ಅವರಿಗೆ ಕೂಲಿ ಕಾರ್ಮಿಕರನ್ನು ನೇಮಿಸಿ ಶೌಚಾಲಯ ನಿರ್ಮಿಸುವಷ್ಟು ಹಣವಿರಲಿಲ್ಲ, ಹೀಗಾಗಿ ತಾವೇ ಸ್ವತಃ ಶೌಚಾಲಯದ ಕಟ್ಟಡವನ್ನು ನಿರ್ಮಾಣ ಮಾಡಿದ್ದಾರೆ. ಮಗನನ್ನು ಹೊರತುಪಡಿಸಿ ಉಳಿದ ಯಾರ ಸಹಾಯವನ್ನು ಅವರು ತೆಗೆದುಕೊಂಡಿಲ್ಲ. ಅವರ ಕಾರ್ಯ ಗ್ರಾಮದ ಇತರರಿಗೂ ಶೌಚಾಲಯ ನಿರ್ಮಿಸಲು ಪ್ರೇರಣೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.