ಬೆಂಗಳೂರು : ಮನುಷ್ಯ ಸೇರಿದಂತೆ ಎಲ್ಲ ಜೀವಸಂಕುಲದ ಭವಿಷ್ಯವಿರುವುದು ಸುಂದರ, ಸ್ವಚ್ಛ ಪರಿಸರದಲ್ಲಿ ಮಾತ್ರ ಎಂಬುದು ಸಾರ್ವತ್ರಿಕ ಸತ್ಯ. ಆದರೆ ಇಂದು ಜಗತ್ತಿನ ಎಲ್ಲ ಕಡೆಯಲ್ಲೂ ಕಾಣುತ್ತಿರುವುದು ಪರಿಸರ ನಾಶವನ್ನೆ. ಅದರಲ್ಲೂ ಒಂದು ಕಡೆ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿರುವ ಆಧುನಿಕ ಜಗತ್ತು, ಇನ್ನೊಂದು ಕಡೆ ಪರಿಸರ ವಿನಾಶದ ಪ್ರತಿಕೂಲ ಪರಿಣಾಮಗಳಿಂದ ಮನುಕುಲದ ಮೇಲೆ ಆಗಬಹುದಾದ ದುಷ್ಪರಿಣಾಮಗಳ ಭಯ. ದಶಕಗಳ ಹಿಂದೆ ವಾಯುಮಾಲಿನ್ಯ, ಜಲಮಾಲಿನ್ಯ ಇತ್ಯಾದಿಗಳು ಪಠ್ಯಪುಸ್ತಕದ ಕಥೆಗಳಾಗಿದ್ದರೆ, ಇಂದು ನಮಗೆ ಬೇಕೋ ಬೇಡವೋ ಇವೆಲ್ಲ ನಮ್ಮ ಕಣ್ಣ ಮುಂದಿರುವ ಕಟು ವಾಸ್ತವಗಳಾಗಿವೆ. ಇದಕ್ಕಿರುವ ಏಕಮೇವ ಪರಿಹಾರ ಗಿಡಮರಗಳನ್ನು ಬೆಳೆಸುವುದು ಹಾಗೂ ಕಾಡುಗಳನ್ನು ಸಂರಕ್ಷಿಸುವುದು.
ಸೇವೆಯ ಜಗತ್ತನ್ನು life’s mission ಆಗಿ ಸ್ವೀಕರಿಸಿ ಕಳೆದ 53 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೋತ್ಥಾನ ಪರಿಷತ್ ಇದೀಗ ಕಾಡು ಬೆಳೆಸುವ ನಿರ್ಧರಿಸಿದೆ. ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲಿರುವ ’ರಾಷ್ಟ್ರೋತ್ಥಾನ ಗೋಶಾಲೆ’ಯ ಪರಿಸರದ 20 ಎಕರೆ ವಿಶಾಲ ಜಾಗದಲ್ಲಿ ಮರಗಿಡಗಳನ್ನು ನೆಟ್ಟು, ಪೋಷಿಸಿ, ಬೆಳೆಸಲು ಯೋಜನೆಯೊಂದನ್ನು ರೂಪಿಸಿದೆ. ರಾಷ್ಟ್ರೋತ್ಥಾನ ಪರಿಷತ್ ದೇಸೀ ಗೋ ತಳಿಗಳ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದ 110 ಎಕರೆ ಜಾಗದಲ್ಲಿ ’ರಾಷ್ಟ್ರೋತ್ಥಾನ ಗೋಶಾಲೆ’ಯನ್ನು ನಡೆಸುತ್ತಿದ್ದು 10 ದೇಸೀ ತಳಿಗಳ 500 ಕ್ಕೂ ಅಧಿಕ ಭಾರತೀಯ ಹಸುಗಳ ಸಂರಕ್ಷಣೆ ಮಾಡಲಾಗುತ್ತಿದೆ. ಇದೇ ಪರಿಸರದಲ್ಲಿ ಈ ಕಾಡು ನಿರ್ಮಾಣಗೊಳ್ಳಲಿದ್ದು ಈ ಯೋಜನೆಗೆ ’ವೃಂದಾವನ’ ಎಂದು ಹೆಸರಿಡಲಾಗಿದೆ.
ಸಾಂಪ್ರದಾಯಿಕ ಸ್ಥಳೀಯ ಹಾಗೂ ಹಣ್ಣುಹಂಪಲುಗಳನ್ನು ನೀಡುವ ಪ್ರಾಣಿಪಕ್ಷಿಸಂಕುಲಕ್ಕೆ ಪೂರಕವಾಗ ಸಸ್ಯಗಳನ್ನು ’ವೃಂದಾವನ’ದಲ್ಲಿ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯ ಮಾರ್ಗದರ್ಶನದಲ್ಲಿ ಬೆಳಸಲಾಗುತ್ತದೆ. ಇದಕ್ಕೆ ಪೂರಕವಾಗಿ ಸಂಪೂರ್ಣ ಸೋಲಾರ್ ಶಕ್ತಿಯನ್ನು ಬಳಸಿ ನೀರಾವರಿ ವ್ಯವಸ್ಥೆಯನ್ನೂ ರೂಪಿಸಲಾಗಿದೆ. ಖ್ಯಾತ ಪರಿಸರ ತಜ್ಞ ಡಾ. ಯಲ್ಲಪ್ಪ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಈ ವೃಂದಾವನ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಇದರ ಪ್ರಾರಂಭಿಕ ಹಂತವಾಗಿ ಈ ವರ್ಷ ಸುಮಾರು 5 ಎಕರೆ ಜಾಗದಲ್ಲಿ 1000 ಗಿಡಗಳನ್ನು ನೆಟ್ಟು ಪೋಷಿಸಲು ನಿರ್ಧರಿಸಲಾಗಿದೆ. ಇದರ ಉದ್ಘಾಟನಾ ಕಾರ್ಯಕ್ರಮ ಜುಲೈ 8 ರಂದು ನಡೆಯಲಿದೆ.
ಯೋಜನೆಯಲ್ಲಿ ಸಾರ್ವಜನಿಕರೂ ಕೈಜೋಡಿಸಬಹುದು
ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲಿರುವ ರಾಷ್ಟ್ರೋತ್ಥಾನ ಗೋಶಾಲೆಯ ಪರಿಸರದಲ್ಲಿ ಕಾಡನ್ನು – ವೃಂದಾವನ – ಬೆಳೆಸುವ ರಾಷ್ಟ್ರೋತ್ಥಾನ ಪರಿಷತ್ನ ಈ ಯೋಜನೆಯಲ್ಲಿ ಸಾರ್ವಜನಿಕರೂ ಕೈಜೋಡಿಸಬಹುದು. ರೂ. 1000 ನೀಡಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ನಿಮ್ಮ ಈ ದೇಣಿಗೆಯಿಂದ 2 ಗಿಡಗಳನ್ನು ನೆಟ್ಟು ಹಲವು ವರ್ಷಗಳ ಕಾಲ ಅವುಗಳನ್ನು ಪೋಷಿಸಿ, ಬೆಳೆಸಿ, ಸಂರಕ್ಷಿಸಲಾಗುವುದು.
ನಮಗೆ ಸರ್ವವನ್ನೂ ನೀಡುವ ಪ್ರಕೃತಿಯ ಸಂರಕ್ಷಣೆಗೆ ಮುಂದಾಗೋಣ ಬನ್ನಿ…ಬನ್ನಿ, ಮಣ್ಣಿಗೆ ಮರಳೋಣ…
ಬಾಂಕ್ ಖಾತೆ ವಿವರ
ಹೆಸರು : ರಾಷ್ಟ್ರೋತ್ಥಾನ ಪರಿಷತ್ ಗೋಶಾಲೆ
ಬ್ಯಾಂಕ್ : ಕೆನರಾ ಬ್ಯಾಂಕ್,
ಶಾಖೆ : ಕೆಂಪೇಗೌಡನಗರ, ಬೆಂಗಳೂರು
A/C No. : 0789101078233
IFSc code : CNRB0000789
(ಹಣ ಪಾವತಿಸಿದ ನಂತರ ನಿಮ್ಮ ವಿವರವನ್ನು (ಯೋಜನೆಯ ವ್ಯವಸ್ಥಾಪಕರು – 9902476719/ 9448240610 ತಿಳಿಸುವುದನ್ನು ಮರೆಯಬೇಡಿ.)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.