ಭಾರತ ಎಂಬುದು ಕೇವಲ ಒಂದು ದೇಶದ ಹೆಸರಲ್ಲ. ಭಾರತವೆಂಬುದು ಇಡಿಯ ಜಗತ್ತಿಗೆ ಬೆಳಕು ನೀಡಿದ ಶ್ರೇಷ್ಠ ರಾಷ್ಟ್ರ. ಭಾ ಎಂದರೆ ಬೆಳಕು ಜ್ಞಾನದ ಬೆಳಕನ್ನು ಜಗತ್ತಿಗೆ ನೀಡಿದ ರಾಷ್ಟ್ರ ನಮ್ಮ ಭಾರತ. ಹಾಗಾದರೆ ರಾಷ್ಟ್ರವೆಂದರೇನು ತಿಳಿಯಬೇಕಲ್ಲ! ಶ್ರೀ ಅರವಿಂದರು ಹೇಳುತ್ತಾರೆ, “ರಾಷ್ಟ್ರವೆಂದರೆ ಅದೊಂದು ಹಿಡಿಯ ಮಣ್ಣಲ್ಲ, ಕೇವಲ ಮನಸ್ಸಿನ ಕಲ್ಪನೆಯಲ್ಲ. ಅದೊಂದು ಪ್ರಚಂಡ ಶಕ್ತಿ ಸ್ರೋತ. ಹಾಗೆ ನೋಡಿದರೆ ನಮ್ಮ ಭಾರತ ಜ್ಞಾನ- ವಿಜ್ಞಾನಗಳ ಸೆಲೆ, ಧನ ಧಾನ್ಯಗಳ ಆಗರ, ವಜ್ರ ವೈಢೂರ್ಯಗಳ ಗಣಿ. ಎಲ್ಲಿ ನೋಡಿದರಲ್ಲಿ ಕಣ್ತಣಿಸುವ ವನರಾಶಿ ನಾಲ್ದಿಕ್ಕುಗಳಲ್ಲಿಯೂ ಸುಶ್ರಾವ್ಯವಾಗಿ ಮೊಳಗುತ್ತಾ ಜಗತ್ತಿಗೆ ಶಾಂತಿ ಸಮಾಧಾನಗಳ ಸಂದೇಶ ಸಾರುತ್ತಿರುವ ವೇದಘೋಷ. ಎತ್ತರವಾದ ಗೋಪುರಗಳಿಂದ ಕೇಳಿ ಬರುತ್ತಿರುವ ದೇವಾಲಯದ ಗಂಟಾನಾದ, ಧರ್ಮ ಸಂದೇಶ. ಇದು ಜಗತ್ತಿನ ಅತ್ಯುಚ್ಛ ಗೌರೀ ಶಂಕರದ ಆವಾಸ ಸ್ಥಾನ, ತುಂಬಿ ಹರಿಯುವ ಗಂಗಾ ಮಾತೆಯ ಒಡಲು. ವಿಶ್ವಕ್ಕೆ ಮಾನವೀಯತೆಯ ಪಾಠವನ್ನು ನಾಗರೀಕತೆಯನ್ನು ಕಲಿಸಿಕೊಟ್ಟ ರಾಷ್ಟ್ರ ನಮ್ಮ ಭಾರತ.
ನಮ್ಮ ರಾಷ್ಟ್ರದ ಸರ್ವತೋಮುಖ ವೈಭವ ಮತ್ತು ಹಿರಿಮೆಗಳನ್ನು ಜಿವಂತಗೊಳಿಸುವುದು ನಮ್ಮ ಆದ್ಯ ಕರ್ತವ್ಯ. ಸಾಮಾನ್ಯವಾಗಿ ಒಂದು ದೇಶದ ವೈಭವವನ್ನು ಅದರ ಭೌತಿಕ ಸಮೃದ್ಧಿಯಿಂದ ಅಳೆಯುತ್ತಾರೆ. ವೈಭವ ಸಂಪನ್ನ ರಾಷ್ಟ್ರಕ್ಕೆ ಸಮೃದ್ಧಿ ಇರಲೇಬೇಕು. ನಿಜ! ಆದರೆ ನಮ್ಮಲ್ಲಿ ರಾಷ್ಟ್ರದ ಕಲ್ಪನೆ ಕೇವಲ ಭೌತಿಕ ಸಂಪತ್ತಲ್ಲ. ಬರಿಯ ರಾಜಕೀಯ ಮತ್ತು ಆರ್ಥಿಕ ಹಕ್ಕುಗಳ ಕಂತೆಯಲ್ಲ. ಅದು ಮೂಲತಃ ಸಾಂಸ್ಕೃತಿಕ ಕಲ್ಪನೆ. ನಮ್ಮ ಪ್ರಾಚೀನ ಭವ್ಯ ಸಾಂಸ್ಕೃತಿಕ ಮೌಲ್ಯಗಳು ಅನಾದಿ ಕಾಲದಿಂದ ಋಷಿಮುನಿಗಳು ತಮ್ಮ ತಪಃಶಕ್ತಿಯ ಮೂಲಕ ಪಡೆದ ಜ್ಞಾನಗಳೇ ಅದರ ಜೀವನದುಸಿರು.
ಭಾರತ ಪ್ರತೀಕ್ಷೇತ್ರದಲ್ಲಿಯೂ ಸಾವಿರಾರು ವರ್ಷಗಳಿಂದ ಮಾಡಿದ ಅಭೂತ ಸಾಧನೆಯ ಪರಿಚಯವನ್ನು ಮಾಡಿಸುವ ಪುಟ್ಟ ಪ್ರಯತ್ನ ನಿಮ್ಮ ಏದುರು ಇಡುತ್ತಿದ್ದೇವೆ. ಇದೇ ಭಾರತ ವೈಭವ.
ಭಾರತ ವೈಭವ 1 – 108 ರ ಮಹತ್ವ
ಈ ಇಡೀ ಜಗತ್ತು ನಕ್ಷತ್ರ ಮಂಡಲ ಗ್ರಹಗಳು ತಾರೆಗಳು ಮನುಷ್ಯರು ಸೇರಿ ಜೀವಿಗಳು ಒಂದು ವಿಶೇಷ ಸೂತ್ರದಡಿಯಲ್ಲಿ ಕಟ್ಟಲ್ಪಟ್ಟಿವೆ ಆ ವಿಶೇಷ ಸೂತ್ರವೇ 108ರ ಮಹತ್ವ. ಈ 108 ಭಾರತೀಯರ ಪಾಲಿಗೆ ಅತೀಂದ್ರಿಯವಾದದ್ದು. ಭಾರತೀಯ ಖಗೋಳಶಾಸ್ತ್ರದ ಪ್ರಕಾರ ಭೂಮಿಯ ಮತ್ತು ಚಂದ್ರನ ನಡುವಿನ ಅಂತರವು ಚಂದ್ರನ ವ್ಯಾಸದ 208 ಪಟ್ಟು ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲದೇ ಭೂಮಿಯ ಮತ್ತು ಸೂರ್ಯನ ನಡುವಿನ ಅಂತರ ಸರಿ ಸುಮಾರು 108 ಸೂರ್ಯನ ವ್ಯಾಸದಷ್ಟು (diameter) ಎಂದು ಭಾಸ್ಕರಾಚಾರ್ಯರು ತಮ್ಮ ಲೀಲಾವತಿ ಎಂಬ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.
ಆಯುರ್ವೇದದ ಪ್ರಕಾರ ನಮ್ಮ ದೇಹದಲ್ಲಿ 108 ಮರ್ಮಾಂಗಗಳು ಇವೆಯಂತೆ!
ಜ್ಯೋತಿಷ್ಯದ ಪ್ರಕಾರ 27 ನಕ್ಷತ್ರಗಳಿದ್ದು ನಮ್ಮ ಜನ್ಮ ಕುಂಡಲಿನಿಯನ್ನು ಇದರ ಮೂಲದಿಂದಲೇ ತಯಾರಿಸುವುದು. ಈ 27 ನಕ್ಷತ್ರಗಳಿಗೂ 4 ಪಾದಗಳಿದ್ದು ಇದನ್ನು ಕೂಡಿದರೆ (27×4 =108) ಆಗುತ್ತದೆ.
ಇನ್ನು ಗಣಿತಶಾಸ್ತ್ರದ ಪ್ರಕಾರ 1x1x2x2x3x3x3=108 ಒಂದು ಸಂಖ್ಯಾ ಶಕ್ತಿಯ ಸ್ವರೂಪವಾದರೆ ಒಂದು ಶಿವ ಸ್ವರೂಪಿ ಹಾಗೆ ನೋಡಿದಾಗ 1×1 ಈ ಜಗತ್ತು 1. 2 ಶಕ್ತಿಗಳು 2 ಸ್ವರೂಪ 4 ಆದರೆ 3 ಲೋಕ 3 ಗುಣ 3 ಅಂತರಂಗ 108 ರಲ್ಲಿ ಭಗವಂತನನ್ನು ಕಾಣುವೆವು.
ಈ 108 ರ ಮಹತ್ವ ನಮಗೆ ಸೃಷ್ಟಿ ಮತ್ತು ಸೃಷ್ಟಿಕರ್ತ ನಡುವಿನ ಸಂಪರ್ಕವನ್ನು ತೋರಿಸುತ್ತದೆ ಭಾರತೀಯ ಶ್ರೇಷ್ಠತೆ. ಈ ಜ್ಞಾನವನ್ನು ಭಾರತ ವಿಶ್ವಕ್ಕೆ ಸುಮಾರು 3000 ವರ್ಷಗಳ ಹಿಂದೆಯೇ ನೀಡಿತ್ತು.ಹಾಗಾದರೆ ಇದು ಭಾರತ ವಿಶ್ವಕ್ಕೆ ನೀಡಿದ ಕೊಡುಗೆ ಅಲ್ಲದೇ ಮತ್ತೇನು ಅಲ್ಲವೇ…
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.