ನವದೆಹಲಿ: ಪ್ರತಿ ಮಗವೂ ಪೌಷ್ಠಿಕವಾಗಿ ಬೆಳೆಯುವುದು ಅತ್ಯಗತ್ಯ. ದೇಶದಲ್ಲಿನ ಅಪೌಷ್ಠಿಕತೆಯನ್ನು ನಿವಾರಣೆ ಮಾಡಲು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಬಡ ಮಕ್ಕಳಿಗೆ ವರದಾನವಾಗುತ್ತಿವೆ.
7 ರಾಜ್ಯಗಳ ಅಂಗನವಾಡಿಗಳಲ್ಲಿ ಸರ್ಕಾರ ಪೌಷ್ಠಿಕತೆಯನ್ನು ಪರಿಶೀಲಿಸುವ ಹೊಸ ಸಾಫ್ಟ್ವೇರ್ನ್ನು ಆರಂಭಿಸಿದೆ, ಶೀಘ್ರದಲ್ಲೇ ಇದು ದೇಶವ್ಯಾಪಿಯಾಗಿ ಕಾರ್ಯಾರಂಭ ಮಾಡಲಿದೆ. ಇದರಿಂದ 10 ಕೋಟಿಗೂ ಅಧಿಕ ಮಕ್ಕಳಿಗೆ ಪ್ರಯೋಜನವಾಗಲಿದೆ.
‘ಇಂಟಿಗ್ರೇಟೆಡ್ ಚೈಲ್ಡ್ ಡೆವಲಪ್ಮೆಂಟ್ ಸರ್ವಿಸಸ್-ಕಾಮನ್ ಅಪ್ಲಿಕೇಶನ್ ಸಾಫ್ಟ್ವೇರ್’ ಇದಾಗಿದ್ದು, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ, ಬಿಹಾರ, ಜಾರ್ಖಾಂಡ್, ಆಂಧ್ರಪ್ರದೇಶ, ತೆಲಂಗಾಣಗಳ 57 ಜಿಲ್ಲೆಗಳಲ್ಲಿ ಮೇ ತಿಂಗಳಲ್ಲೇ ಆರಂಭಗೊಂಡಿದೆ.
ಈ ಸಾಫ್ಟ್ವೇರ್ ಮಕ್ಕಳ ಪೌಷ್ಠಿಕ ಇನ್ಟೇಕ್ನ ವಿಸ್ತೃತ ಮಾಹಿತಿಯನ್ನು ಪ್ರತಿ ಹಂತದಲ್ಲೂ ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.