ಹೇಗ್ಯು: ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆಯ ಜಾಗತಿಕ ನಿಷೇಧವನ್ನು ಎತ್ತಿ ಹಿಡಿಯುವ ಸಲುವಾಗಿ ಭಾರತ ಕೆಮಿಕಲ್ ವೆಪನ್ ಕನ್ವೆನ್ಷನ್ಗೆ ಸಂಪೂರ್ಣ ಸಹಕಾರವನ್ನು ನೀಡಿದೆ.
‘ರಾಸಾಯನಿಕ ಶಸ್ತ್ರಾಸ್ತ್ರ ಬಳಕೆಯ ನಿಷೇಧ ವಿಷಯದಲ್ಲಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಭಾರತ ಸಹಕಾರ ನೀಡಲಿದೆ’ ಎಂದು ನೆದರ್ಲ್ಯಾಂಡ್ನ ಭಾರತ ರಾಯಭಾರಿ ಮತ್ತು ಒಪಿಸಿಡಬ್ಲ್ಯೂ( Organisation for the Prohibition of Chemical Weapons)ನ ಖಾಯಂ ಪ್ರತಿನಿಧಿ ವೇಣು ರಾಜಮೊನಿ ಹೇಳಿದ್ದಾರೆ.
ಕೆಮಿಕಲ್ ವೆಪನ್ಸ್ ಕನ್ವೆನ್ಷನ್ನ ನಾಲ್ಕನೇ ವಿಶೇಷ ಸೆಷನ್ಸ್ನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಸಾಯನಿಕ ಶಸ್ತ್ರಾಸ್ತ್ರ ಬಳಕೆಯ ಜಾಗತಿಕ ನಿಷೇಧವನ್ನು ಎತ್ತಿ ಹಿಡಿಯುವ ಸಲುವಾಗಿ ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಕೈಜೋಡಿಸಲು ಭಾರತ ಸಿದ್ಧವಿದೆ’ ಎಂದಿದ್ದಾರೆ.
ರಾಸಾಯನಿಕ ಶಸ್ತ್ರಾಸ್ತಗಳ ಬಳಕೆಯನ್ನು ಯಾವುದೇ ಪರಿಸ್ಥಿತಿಯಲ್ಲೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ, ತಪ್ಪಿತಸ್ಥರನ್ನು ಇಂತಹ ಕೃತ್ಯಕ್ಕೆ ಹೊಣೆಗಾರರನ್ನಾಗಿ ಮಾಡಬೇಕು ಎಂದು ಪ್ರತಿಪಾದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.