ಸಿಯಾಚೆನ್: ವಿಶ್ವದ ಅತೀ ಎತ್ತರದ ಯುದ್ಧಭೂಮಿ ಸಿಯಾಚಿನ್ನಲ್ಲಿ ನಿಯೋಚಿತರಾಗಿರುವ ಯೋಧರು ಜೂನ್ 21ರಂದು ಯೋಗ ಕಾರ್ಯಕ್ರಮ ಆಯೋಜಿಸಲಿದ್ದಾರೆ.
ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಇಶಾ ಫೌಂಡೇಶನ್ನ ಸದ್ಗುರು ಜಗ್ಗಿ ವಾಸುದೇವ್ ಅವರು ಸಿಯಾಚಿನ್ನಲ್ಲಿನ 200 ಸೈನಿಕರೊಂದಿಗೆ ಈ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಸದ್ಗುರು ಅವರ ಭೇಟಿಗೂ ಮುನ್ನ, ಹಠ ಯೋಗ ಶಿಕ್ಷಕರ ತಂಡವೊಂದು ಅಲ್ಲಿ ಯೋಗ ಸೆಷನ್ಸ್ ನಡೆಸಲಿದೆ. ಅತೀ ಎತ್ತರದ ವಿಪರೀತ ಚಳಿಯ ವಾತಾವರಣದಲ್ಲಿ ಇರುವವರಿಗೆ ಪೂರಕವಾದಂತಹ ವಿಶೇಷ ಯೋಗವನ್ನು ಇವರು ಸೈನಿಕರಿಗೆ ಕಲಿಸಿಕೊಡಲಿದ್ದಾರೆ.
ಸದ್ಗುರು ಅವರು ಸೈನಿಕರೊಂದಿಗೆ ವಿವಿಧ ವಿಷಯಗಳ ಬಗ್ಗೆ ಅದರಲ್ಲೂ ಪ್ರಮುಖವಾಗಿ ಯೋಗದ ಆರೋಗ್ಯಕಾರಿ ಅಂಶಗಳು, ಮಾನಸಿಕ, ದೈಹಿಕ ಸಮತೋಲನ ಇತ್ಯಾದಿಗಳ ಬಗ್ಗೆ ಸಂವಾದ ನಡೆಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.