ನವದೆಹಲಿ : ವಿಶ್ವ ಯೂತ್ ಆರ್ಚರಿ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸ ಬೇಕಾದ ಭಾರತದ 21 ಮಂದಿಯನ್ನು ಒಳಗೊಂಡ ತಂಡಕ್ಕೆ ಅಮೇರಿಕ ವೀಸಾ ನಿರಾಕರಣೆ ಮಾಡಿದೆ. ಈ ಹಿನ್ನಲೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಲು ಭಾರತೀಯ ಆರ್ಚರಿ ಸಂಸ್ಥೆ ನಿರ್ಧರಿಸಿದೆ.
ಜೂ 8 ರಿಂದ 14 ರವರೆಗೆ ದಕ್ಷಿಣ ಡಕೋಟಾದಲ್ಲಿನ ಯಾಂಕ್ಟಾನ್ನಲ್ಲಿ ನಡೆಯುವ ವಿಶ್ವ ಯೂತ್ ಆರ್ಚರಿ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳುವ ಸಲುವಾಗಿ 20 ವರ್ಷದೊಳಗಿನ 21 ಯುವ ಆಟಗಾರರು ಮತ್ತು ಕೋಚ್ ಅಮೆರಿಕಾದ ವೀಸಾ ಕೋರಿ ಅರ್ಜಿ ಸಲ್ಲಿಸಿದ್ದರು.
ಆದರೆ ಅಮೆರಿಕಾ 7 ಆಟಗಾರರನ್ನು ಒಳಗೊಂಡಂತೆ 2 ಕೋಚ್ ಮತ್ತು ಒರ್ವ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳಗೆ ವೀಸಾ ಮಾತ್ರ ನೀಡಿತ್ತು. ಉಳಿದವರಿಗೆ ನಿರಾಕರಿಸಲಾಗಿದ್ದು ಇದರಿಂದ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸುವ ನಿರ್ಧಾರ ಕೈಬಿಟ್ಟಿದೆ.
ಸಂವಹನ ಕೊರತೆ ಮತ್ತು ವೀಸಾ ನೀಡಿದರೆ ತವರಿಗೆ ವಾಪಸ್ಸಾಗದ ಹಿನ್ನಲೆ ಅವರಿಗೆ ವೀಸಾ ನಿರಾಕರಿಸಿದೆ. ಈ ಕ್ರೀಡಾಪಟುಗಳು ಅಸ್ಸಾಂ, ಜಾರ್ಖಂಡ್, ಪಂಜಾಬ್ ಮತ್ತು ಉತ್ತರಪ್ರದೇಶಗಳ ಗುಡ್ಡಗಾಡು ಪ್ರದೇಶದವರು ಆದುದರಿಂದಲೂ ವೀಸಾ ನಿರಾಕರಿಸಿರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಇದು ಅಮೆರಿಕಾದ ಮನಸ್ಸಿನಲ್ಲಿರುವ ವರ್ಣಭೇಧ ನೀತಿಯ ಅನಾವರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.