ಡೆಹ್ರಾಡೂನ್: 27 ವರ್ಷದ ಇಂಡಿಯನ್ ಮಿಲಿಟರಿ ಅಕಾಡಮಿಯ ಕೆಡೆಟ್ ರಾಜಶೇಖರ್ ಸಾವನ್ನೇ ಗೆದ್ದು ಇಂದು ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್ನಲ್ಲಿ ಯೋಧನಾಗಿ ನಿಯೋಜಿತಗೊಂಡಿದ್ದಾರೆ. ಇದು ಯಾವ ಅದ್ಭುತಕ್ಕಿಂತಲೂ ಕಡಿಮೆಯಲ್ಲ.
ಡೆಹ್ರಾಡೂನ್ ಅಕಾಡಮಿಯಲ್ಲಿ ಕೆಡೆಟ್ ಆಗಿ ತರಬೇತಿ ಪಡೆಯುತ್ತಿದ್ದ ಇವರು ‘ಪೆಹ್ಲಾ ಕದಮ್’ ಅಭ್ಯಾಸದ ವೇಳೆ ಅತೀ ಭಾರವನ್ನು ಹೊತ್ತು 10ಕಿಮೀ ಓಡುತ್ತಿದ್ದ ಸಂದರ್ಭ ಏಕಾಏಕಿ ಕುಸಿದು ಬಿಟ್ಟಿದ್ದರು. ಇವರನ್ನು ಡೆಹ್ರಾಡೂನ್ ಮಿಲಿಟರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಿರ್ಜಲೀಕರಣದಿಂದಾಗಿ ಇವರ ಕಿಡ್ನಿ ಮತ್ತು ಲಿವರ್ ಶೇ.70ರಷ್ಟು ಡ್ಯಾಮೇಜ್ ಆಗಿದೆ, ಇವರು ಬದುಕುವುದು ಇನ್ನು ಅನುಮಾನವೇ ಎಂದು ವೈದ್ಯರು ಹೇಳಿದ್ದರು.
40 ದಿನಗಳ ಕಾಲ ಇವರು ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸಿದ್ದರು. ಕೊನೆಗೂ ವೈದ್ಯರ ಮಾತನ್ನು ಸುಳ್ಳು ಮಾಡಿ ಇವರು ಬದುಕಿ ಬಂದಿದ್ದಾರೆ. ಆಸ್ಪತ್ರೆಯಿಂದ ಮರಳಿದ ಬಳಿಕ ಜಿಮ್ನಲ್ಲಿ ಬೆವರಿಳಿಸಿ ಹಿಂದಿನ ಸಹಜ ಸ್ಥಿತಿಯತ್ತ ಮರಳಿದ್ದಾರೆ. ಮಿಲಿಟರಿ ಅಕಾಡಮಿಯ ಪ್ರತಿ ಕಠಿಣ ತರಬೇತಿಯನ್ನೂ ದಾಟಿ ಇವರು ಪಾಸ್ ಔಟ್ ಆಗಿದ್ದಾರೆ.
ತಮಿಳುನಾಡಿನ ಮಧುರೈ ಮೂಲದ ಇವರು ಎಳೆವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಹೋರಾಟಕ್ಕೆ ಸಾಥ್ ನೀಡುತ್ತಾ ಬೆಳೆದವರು. ಇಂದು ಅವರು 12ನೇ ಅಸ್ಸಾಂ ರೈಫಲ್ಸ್ನಲ್ಲಿ ಸಿಯಾಚಿನ್ನಲ್ಲಿ ನಿಯೋಜಿತಗೊಂಡಿದ್ದಾರೆ. ಸಾವನ್ನೇ ಗೆದ್ದ ಈ ಧೀರನಿಗೆ ಸಿಯಾಚಿನ್ನ ಪ್ರತಿಕೂಲ ಹವಮಾನ ಕಠಿಣವಾಗಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.