ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ನಮೋ ಅಪ್ಲಿಕೇಶನ್ ಮೂಲಕ ಸಂವಾದ ನಡೆಸಿದರು. ಸ್ವಸ್ಥ ಭಾರತವನ್ನು ನಿರ್ಮಿಸುವಲ್ಲಿ ಸ್ವಚ್ಛ ಭಾರತ ಮಹತ್ವದ ಪಾತ್ರವನ್ನು ನಿಭಾಯಿಸುತ್ತಿದೆ ಎಂದರು.
‘ಸುದೀರ್ಘ ಕಾಲದ ಅನಾರೋಗ್ಯದಿಂದಾಗಿ ಬಡವರ ಮತ್ತು ಮಧ್ಯಮವರ್ಗದವರ ಮೇಲೆ ಆರ್ಥಿಕ ಹೊರೆ ಬೀಳುತ್ತದೆ. ಪ್ರತಿ ಭಾರತೀಯನಿಗೂ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ನೀಡುವುದು ನಮ್ಮ ಗುರಿ. ನಮ್ಮ ಹಲವಾರು ಆರೋಗ್ಯ ಯೋಜನೆಗಳು ಅವಶ್ಯಕತೆಯಿರುವವರನ್ನು ತಲುಪುತ್ತಿದೆ’ ಎಂದರು.
‘ಔಷಧಿಯನ್ನು ಖರೀದಿ ಮಾಡುವುದು ಬಡವರ ಅತೀದೊಡ್ಡ ಸವಾಲು, ಬಡವರಿಗೆ ಕೈಗೆಟುಕುವ ದರದಲ್ಲಿ ಔಷಧಿ ಸಿಗಬೇಕು ಎಂಬ ಉದ್ದೇಶದಿಂದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ’ವನ್ನು ಆರಂಭಿಸಿದ್ದೇವೆ. ದೇಶದಾದ್ಯಂತ ಈ ಯೋಜನೆಯ ಪ್ರಯೋಜನವನ್ನು ಜನ ಪಡೆದುಕೊಳ್ಳುತ್ತಿದ್ದಾರೆ’ ಎಂದರು.
‘ಸ್ಟೆಂಟ್ಗಳ ದರವನ್ನು ಭಾರೀ ಮಟ್ಟದಲ್ಲಿ ಕೇಂದ್ರ ಇಳಿಕೆ ಮಾಡಿದ್ದು, ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಭಾರೀ ಅನುಕೂಲಗಳಾಗುತ್ತಿವೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.