ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟವನ್ನು ಆಚರಿಸದಿರಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನಿರ್ಧರಿಸಿದ್ದಾರೆ. ಈ ಮೂಲಕ ಅಬ್ದುಲ್ ಕಲಾಂ ಅವರ ಹಾದಿಯನ್ನೇ ಅನುಸರಿಸಿದ್ದಾರೆ. ಕಲಾಂ ಅವರೂ ತಮ್ಮ ಅಧಿಕಾರವಧಿಯಲ್ಲಿ ಇಫ್ತಾರ್ ಆಚರಿಸಿರಲಿಲ್ಲ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಷ್ಟ್ರಪತಿಗಳ ಮಾಧ್ಯಮ ಕಾರ್ಯದರ್ಶಿ ಅಶೋಕ್ ಮಲಿಕ್, ‘ರಾಷ್ಟ್ರಪತಿ ಭವನ ಜಾತ್ಯಾತೀತ ರಾಷ್ಟ್ರದ ಸಂಕೇತವಾಗಿದೆ. ಧಾರ್ಮಿಕ ವಿಷಯ ಮತ್ತು ಆಡಳಿತವನ್ನು ಪ್ರತ್ಯೇಕವಾಗಿಡಬೇಕು. ತೆರಿಗೆದಾರರ ಹಣದಲ್ಲಿ ಭವನ ಯಾವುದೇ ಧರ್ಮದ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸುವುದಿಲ್ಲ’ ಎಂದಿದ್ದಾರೆ.
ಕಳೆದ ವರ್ಷ ಕೋವಿಂದ್ ಅವರು ರಾಷ್ಟ್ರಪತಿಯಾದ ಬಳಿಕ ರಾಷ್ಟ್ರಪತಿ ಭವನದಲ್ಲಿ ಕ್ರಿಸ್ಮಸ್ ಸಂದರ್ಭದಲ್ಲಿ ಆಚರಿಸಲಾಗುತ್ತಿದ್ದ ‘ಕ್ಯಾರೋಲ್ ಸಿಂಗಿಂಗ್’ನ್ನು ರದ್ದುಗೊಳಿಸಲಾಗಿತ್ತು. ಪ್ರತಿಭಾ ಪಾಟೀಲ್, ಪ್ರಣವ್ ಮುಖರ್ಜಿ ಸಂದರ್ಭದಲ್ಲಿ ಈ ಎರಡು ಆಚರಣೆಗಳೂ ಪ್ರಚಲಿತದಲ್ಲಿದ್ದವು.
ಕಲಾಂ ಅವರಂತೆ ಇಫ್ತಾರ್ಗೆಂದು ತೆಗೆದಿಡಲಾದ ಹಣವನ್ನು ಅನಾಥಾಶ್ರಮಗಳಿಗೆ ನೀಡಲು ರಾಷ್ಟ್ರಪತಿ ಕೋವಿಂದ್ ಅವರು ನಿರ್ಧರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.