ಬೆಂಗಳೂರು: ಬೀದಿಯಲ್ಲಿ ಬಿದ್ದಿದ್ದ ಅನಾಥ ಮಗುವಿಗೆ ಹಾಲುಣಿಸುವ ಮೂಲಕ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಕಾನ್ಸ್ಸ್ಟೇಬಲ್ ಅರ್ಚನಾ ತಾಯ್ತನದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಪೊಲೀಸ್ ಆದರೂ ತನ್ನೊಳಗಿನ ತಾಯಿ ಮಮತೆ ಜಾಗೃತವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿ ನಿರ್ಮಾಣ ಹಂತದ ಕಟ್ಟಡದ ಸಮೀಪ ಮಗುವನ್ನು ಪ್ಲಾಸ್ಟಿಕ್ ಕವರ್ನೊಳಗೆ ಹಾಕಿ ಬಿಸಾಕಲಾಗಿತ್ತು. ದಾರಿ ಹೋಕರು ಮಾಹಿತಿ ನೀಡಿದ ತಕ್ಷಣ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ನಾಗೇಶ್ ಆರ್ ಸ್ಥಳಕ್ಕಾಗಮಿಸಿದ್ದರು. ಮಗುವಿನ ಹೊಕ್ಕಳಿನಿಂದ ರಕ್ತ ಸೋರುತ್ತಿತ್ತು. ಅದನ್ನು ಕುತ್ತಿಗೆಗೆ ಸುತ್ತಲಾಗಿತ್ತು.
ತಕ್ಷಣ ಅವರು ಮಗುವನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿದರು, ಅಲ್ಲಿ ವೈದ್ಯರ ಚಿಕಿತ್ಸೆ ಕೊಡಿಸಿ ಬಳಿಕ ಮಗುವನ್ನು ಪೊಲೀಸ್ ಸ್ಟೇಶನ್ಗೆ ತರಲಾಯಿತು. 3 ತಿಂಗಳ ಮಗುವಿನ ತಾಯಿಯಾಗಿ, ಇತ್ತೀಚಿಗಷ್ಟೇ ಕೆಲಸಕ್ಕೆ ಮರು ಸೇರ್ಪಡೆಗೊಂಡಿದ್ದ ಅರ್ಚನಾ ತಕ್ಷಣ ಮಗುವನ್ನು ಎತ್ತಿಕೊಂಡು ಅದಕ್ಕೆ ಹಾಲುಣಿಸಿದರು.
ಮಗುವಿನ ಅಳುವನ್ನು ನನಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ, ನನ್ನ ಸ್ವಂತ ಮಗು ಅಳುತ್ತಿದೆ ಎಂದೆನಿಸಿತು. ಹೀಗಾಗಿ ಮಗುವಿಗೆ ಹಾಲುಣಿಸಿದೆ ಎಂದು ಅರ್ಚನಾ ಹೇಳಿದ್ದಾರೆ.
ಅರ್ಚನಾ ಕಾರ್ಯವನ್ನು ಬೆಂಗಳೂರು ಸಿಟಿ ಪೊಲೀಸರು ಟ್ವಿಟರ್ನಲ್ಲಿ ಶ್ಲಾಘಿಸಿದ್ದಾರೆ. ನಮ್ಮ ಕಾನ್ಸ್ಸ್ಟೇಬಲ್ ಅರ್ಚನಾ ಅವರೊಳಗಿನ ತಾಯಿಗೆ ನಮ್ಮ ಸೆಲ್ಯೂಟ್ ಎಂದಿದ್ದಾರೆ.
ಇತರರೂ ಥ್ಯಾಂಕ್ಯೂ ಅರ್ಚನಾ ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಟ್ವಿಟ್ ಮಾಡಿ, ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.