ಮುಂಬಯಿ: ಪರಿಸರ ಸ್ನೇಹಿ, ಸ್ವಚ್ಛ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳನ್ನು ಹೊಂದಿರುವ ಭಾರತದ 13 ಬೀಚ್ಗಳು ಶೀಘ್ರದಲ್ಲಿ ‘ಬ್ಲೂ ಫ್ಲ್ಯಾಗ್ ಸರ್ಟಿಫಿಕೇಟ್’ಗಳನ್ನು ಪಡೆಯಲಿದೆ.
ಒರಿಸ್ಸಾ, ಮಹಾರಾಷ್ಟ್ರ ಮತ್ತು ಇತರ ಕರಾವಳಿ ರಾಜ್ಯಗಳ ಬೀಚ್ಗಳಿಗೆ ಏಷ್ಯಾದಲ್ಲೇ ಪ್ರಥಮ ಬಾರಿಗೆ ಬ್ಲೂ ಫ್ಲ್ಯಾಗ್ ಸರ್ಟಿಫಿಕೇಟ್ ಸಿಗಲಿದೆ.
ಪರಿಸರ ಸಚಿವಾಲಯದಿಂದ ರಚನೆಗೊಂಡಿರುವ ‘ಸೊಸೈಟಿ ಫಾರ್ ಇಂಟಿಗ್ರೇಟೆಡ್ ಕೋಸ್ಟಲ್ ಮ್ಯಾನೇಜ್ಮೆಂಟ್(SICOM)’ ಭಾರತದ ಬೀಚ್ಗಳನ್ನು ಅಭಿವೃದ್ಧಿಪಡಿಸುತ್ತದೆ. ಕರಾವಳಿ ಪ್ರದೇಶಗಳ ನಿರ್ವಹಣೆಯನ್ನೂ
ಮಾಡುತ್ತದೆ.
‘ಬ್ಲ್ಯೂ ಫ್ಲ್ಯಾಗ್ ಸರ್ಟಿಫಿಕೇಟ ಗುಣಮಟ್ಟಗಳಿಗೆ ಅನುಗುಣವಾಗಿ ಬೀಚ್ನ ವಾತಾವರಣವನ್ನು ಸ್ವಚ್ಛ ಮತ್ತು ಪ್ರವಾಸಿ ಸ್ನೇಹಿಗೊಳಿಸುತ್ತಿದ್ದೇವೆ. ಇದರನ್ವಯ ಬೀಚ್ಗಳು ಪ್ಲಾಸ್ಟಿಕ್ ಮುಕ್ತ ಮತ್ತು ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಒಳಗೊಂಡಿರಬೇಕು’ ಎಂದು SICOMನ ಮುಖ್ಯಸ್ಥ ಅರವಿಂದ್ ನೌಟಿಯಾಲ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.