ಬೆಳ್ತಂಗಡಿ: ಯುವ ಬ್ರಿಗೇಡ್ ನೇತೃತ್ವದಲ್ಲಿ ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಯನ್ನು ಶುದ್ಧೀಕರಿಸುವ ಕಾರ್ಯ ಜರುಗಿತು. ಭಾನುವಾರ ಧರ್ಮಸ್ಥಳದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ರಾಜ್ಯದ ಹಲವೆಡೆಯಿಂದ ಆಗಮಿಸಿದ 500ಕ್ಕೂ ಅಧಿಕ ಕಾರ್ಯಕರ್ತರು ನದಿಯನ್ನು ಸ್ವಚ್ಛಗೊಳಿಸಿದರು.
ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸ್ವಚ್ಛತಾ ಕಾರ್ಯ ಜರುಗಿದ್ದು, ಕಾರ್ಯಕರ್ತರು ನದಿಗಿಳಿದು ಅದರಲ್ಲಿದ್ದ ಪ್ಲಾಸ್ಟಿಕ್, ದೇವರ ಫೋಟೋ, ಪ್ರಸಾದ ವಸ್ತುಗಳು, ತೆಂಗಿನ ಕಾಯಿ, ಆಟಿಕೆ ವಸ್ತು, ಸಾಬೂನು, ಬಾಚಣಿಕೆ, ಚಪ್ಪಲಿ ಇತ್ಯಾದಿಗಳನ್ನು ತೆಗೆದು ಸ್ವಚ್ಛತೆಯನ್ನು ಮಾಡುವ ಮೂಲಕ ಎಲ್ಲರ ಶ್ಲಾಘನೆಗೆ ಪಾತ್ರರಾದರು. 13 ಟ್ರಾಕ್ಟರಿಗೂ ಮಿಕ್ಕಿ ಕಸವನ್ನು ನದಿಯಿಂದ ಹೊರತೆಗೆಯಲಾಯಿತು.
ಧಾರ್ಮಿಕ ಆಚರಣೆಯೊಳಗೆ ಮೂಢನಂಬಿಕೆಗಳು ತುಂಬಿ ನದಿಗಳು ಕಲುಷಿತಗೊಳ್ಳುತ್ತಿವೆ. ದಯವಿಟ್ಟು ನದಿ ನೀರನ್ನು ಕಲುಷಿತಗೊಳಿಸಬೇಡಿ ಎಂದು ಕಾರ್ಯಕರ್ತರು ಭಕ್ತರಲ್ಲಿ ಮನವಿ ಮಾಡಿಕೊಂಡರು.
ಧರ್ಮಸ್ಥಳ ಧರ್ಮಾಧಿಕಾರಿಯವರ ಆಶೀರ್ವಾದ ಮತ್ತು ಅನುಮತಿಯೊಂದಿಗೆ ಈ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ. ಈ ಸೇವಾ ಕಾರ್ಯ ನಮಗೆ ಸಂತಸ ನೀಡಿದೆ. ಪರಿಸರ ಮತ್ತು ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಸಂತಸದಿಂದ ನುಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.