ನವದೆಹಲಿ: ರಷ್ಯಾದಿಂದ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ನ್ನು ಖರೀದಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲು ಭಾರತ ಸಜ್ಜಾಗಿದೆ. ಈ ವಿಷಯವನ್ನು ರಕ್ಷಣಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅಮೆರಿಕಾದಿಂದ ಈ ಪ್ರಕ್ರಿಯೆ ಕುರಿತು ವಿರೋಧ ವ್ಯಕ್ತವಾದರೂ ಲೆಕ್ಕಿಸದ ಭಾರತ ರಷ್ಯಾದ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಖರೀದಿಗೆ ಮುಂದಾಗಿದೆ.
ರಕ್ಷಣಾ ಸಚಿವಾಲಯವು ಭದ್ರತೆಯ ಉನ್ನತ ಸಂಪುಟ ಸಮಿತಿಯನ್ನು ಸಂಪರ್ಕಿಸಿ ರಷ್ಯಾ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ಗಳ ಐದು ಯುನಿಟ್ಗಳನ್ನು ಖರೀದಿಸುವ ಪ್ರಕ್ರಿಯೆಗೆ ಅನುಮೋದನೆಯನ್ನು ಪಡೆಯಲಿದೆ.
ಒಟ್ಟು 5.5 ಬಿಲಿಯನ್ ಡಾಲರ್ಗಳ ಒಪ್ಪಂದ ಇದಾಗಿದ್ದು, ಇದಕ್ಕೆ ಅಮೆರಿಕಾದಿಂದ ವಿರೋಧ ವ್ಯಕ್ತವಾಗಿದೆ. ಈ ಒಪ್ಪಂದವನ್ನು ಮುಂದುವರೆಸಿದರೆ ಭಾರತದೊಂದಿಗೆ ಅಮೆರಿಕಾ ಮಿಲಿಟರಿ ಸಹಕಾರವನ್ನು ರದ್ದುಗೊಳಿಸಲಿದೆ ಎಂದಿದೆ. ಆದರೂ ರಕ್ಷಣಾ ಸಚಿವಾಲಯ ಈ ಒಪ್ಪಂದವನ್ನು ರದ್ದುಪಡಿಸುವ ಯಾವುದೇ ಯೋಚನೆಯಲಿಲ್ಲ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆಯ ಉನ್ನತ ಸಂಪುಟ ಸಮಿತಿ ಇದಕ್ಕೆ ಅನುಮೋದನೆ ನೀಡುವುದನ್ನೇ ರಕ್ಷಣಾ ಸಚಿವಾಲಯ ಕಾಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.