ರೋಹ್ಟಕ್: ಯುಪಿಎಸ್ಸಿ (ಕೇಂದ್ರ ನಾಗರಿಕ ಸೇವಾ ಸಮಿತಿ) ಪರೀಕ್ಷೆಯಲ್ಲಿ 2ನೇ ರ್ಯಾಂಕ್ ಪಡೆದ ಅನು ಕುಮಾರಿ ಅವರು ಹರಿಯಾಣದ ಸೋನಿಪತ್ ಜಿಲ್ಲೆಯ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
ಹರಿಯಾಣ ಸ್ಥಳಿಯಾಡಳಿತ ಸಚಿವೆ ಕವಿತಾ ಜೈನ್ ಅವರು ಈ ಆಯ್ಕೆಯನ್ನು ಮಾಡಿದ್ದು, ಹೆಣ್ಣು ಶಿಶುವನ್ನು ಗರ್ಭದಲ್ಲೇ ಕೊಲ್ಲುವ ಪಾಪಿಗಳಿಗೆ ಅನು ಕುಮಾರಿ ಉತ್ತರವಾಗಿದ್ದಾರೆ. ಅವರು ಸ್ಫೂರ್ತಿಯಾಗಿ ಹೊರಹೊಮ್ಮಿದ್ದು, ಜನರ ಮನಸ್ಥಿತಿಯನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ.
31 ವರ್ಷದ ಅನು ಕುಮಾರಿಯವರು 4 ವರ್ಷದ ಮಗುವಿನ ತಾಯಿಯಾಗಿದ್ದಾರೆ. ಕುಟುಂಬದ ಸಹಕಾರದೊಂದಿಗೆ ಇಂದು ಅವರು ನಾಗರಿಕ ಸೇವಾ ಪರೀಕ್ಷೆಯಲ್ಲಿ 2ನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.