ನವದೆಹಲಿ: 2018-19ರ ಅವಧಿಯಲ್ಲಿ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಯನ್ನು ಏರಿಕೆ ಮಾಡಲು ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಪ್ರತಿ ಕ್ವಿಂಟಾಲ್ ಕಚ್ಚಾ ಸೆಣಬಿಗೆ ರೂ.3700 ಬೆಂಬಲ ಬೆಲೆಯನ್ನು ನೀಡಲಾಗುತ್ತದೆ. 2017-18ರ ಅವಧಿಯಲ್ಲಿ ಇದು ರೂ.3500 ಇತ್ತು.
ಸರ್ಕಾರದ ನಿರ್ಧಾರದಿಂದಾಗಿ ಸೆಣಬು ಬೆಳೆಗಾರರಿಗೆ ನ್ಯಾಯಸಮ್ಮತ ಕನಿಷ್ಠ ಬೆಲೆ ದೊರಕಲಿದ್ದು, ದೇಶದಲ್ಲಿ ಸೆಣಬು ಉತ್ಪಾದನೆಗೆ ಹಣ ಹೂಡಲು ನೆರವಾಗಲಿದೆ.
ಬೆಂಬಲ ಬೆಲೆ ಏರಿಕೆ ಸೆಣಬು ವಲಯದ ಪ್ರಮುಖ ಬೇಡಿಕೆಯಾಗಿದ್ದು, ಬೆಳೆಗಾರರ, ಕಾರ್ಮಿಕರ ಜೀವನಾಧಾರಕ್ಕೆ ಬೆಂಬಲವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.