ನವದೆಹಲಿ: ದೇಶದಾದ್ಯಂತ ಇರುವ 24 ಸ್ವಯಂಘೋಷಿತ ಮತ್ತು ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬುಧವಾರ ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ಸ್(ಯುಜಿಸಿ) ಬಿಡುಗಡೆಗೊಳಿಸಿದೆ.
ಕಮರ್ಷಿಯಲ್ ಯೂನಿವರ್ಸಿಟಿ, ಯುನೈಡೆಟ್ ನೇಷನ್ಸ್ ಯೂನಿವರ್ಸಿಟಿ, ವೊಕೇಶನಲ್ ಯೂನಿವರ್ಸಿಟಿ, ಎಡಿಆರ್-ಸೆಂಟ್ರಿಕ್ ಜುರಿಡಿಕಲ್ ಯೂನಿವರ್ಸಿಟಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ಎಂಜಿನಿಯರಿಂಗ್, ವಿಶ್ವಕರ್ಮ ಓಪನ್ ಯೂನಿವರ್ಸಿಟಿ ಫಾರ್ ಸೆಲ್ಫ್ ಎಂಪ್ಲಾಯ್ಮೆಂಟ್, ಆಧ್ಯಾತ್ಮಿಕ್ ವಿಶ್ವವಿದ್ಯಾಲಯ್, ವಾರಣಾಸಿಯ ಸಂಸ್ಕ್ರತ್ ವಿಶ್ವವಿದ್ಯಾಲಯಗಳು ಫೇಕ್ ಯೂನಿವರ್ಸಿಸಿಟಗಳ ಪಟ್ಟಿಯಲ್ಲಿದೆ.
ಬಿಹಾರ, ಕರ್ನಾಟಕ, ಮಥುರಾ, ಒರಿಸ್ಸಾ, ಕಾನ್ಪುರ, ಪ್ರತಾಪಗಢ, ಅಲಿಘಢ, ಕೇರಳ, ನಾಗ್ಪುರದ ತಲಾ ಒಂದು ವಿಶ್ವವಿದ್ಯಾಲಯಗಳು ಪಟ್ಟಿಯಲ್ಲಿವೆ.
ಈ ವಿಶ್ವವಿದ್ಯಾಲಯಗಳು ಯಾವುದೇ ಪದವಿಗಳನ್ನು ನೀಡಲು ಅರ್ಹವಲ್ಲ ಎಂದು ನೋಟಿಸ್ನಲ್ಲಿ ಯುಜಿಸಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.