ನವದೆಹಲಿ: ಭಾರತದ ವಿಕಲಚೇತನ ಆರ್ಮ್ ರೆಸ್ಲರ್ ಆಟಗಾರ ಶ್ರೀಮಂತ್ ಜಾ ಅವರು ಕಝಕೀಸ್ತಾನದಲ್ಲಿ ನಡೆಯುತ್ತಿರುವ ಏಷ್ಯನ್ ಆರ್ಮ್ರೆಸ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ಶುಕ್ರವಾರ ಕಂಚಿನ ಪದಕವನ್ನು ಗೆದ್ದಿದ್ದಾರೆ.
ಎಪ್ರಿಲ್ 16ರಿಂದ 22ರವರೆಗೆ ಏಷ್ಯನ್ ಆರ್ಮ್ ರೆಸ್ಲರ್ ಚಾಂಪಿಯನ್ಶಿಪ್ ಜರುಗುತ್ತಿದೆ.
25 ವರ್ಷದ ಛತ್ತೀಸ್ಗಢದ ಶ್ರೀಮಂತ್ ಅವರು ೮೦ಕೆಜಿ ಸೀನಿಯರ್ ವಿಭಾಗದಲ್ಲಿ ಕಂಚು ಗೆದ್ದಿದ್ದಾರೆ. ತಜಕೀಸ್ತಾನದ ಫಿರೂಝ್ ಮತ್ತು ಮಂಗೋಲಿಯಾ ಆಟಗಾರ ಮುನ್ಕಬೊಲ್ಡ್ ಅವರು ಕ್ರಮವಾಗಿ ಬಂಗಾರ, ಬೆಳ್ಳಿ ಗೆದ್ದಿದ್ದಾರೆ.
ಎರಡು ಕೈಗಳಲ್ಲಿ ಕೇವಲ 4 ಬೆರಳುಗಳನ್ನು ಹೊಂದಿರುವ ಶ್ರೀಮಂತ್ 2010ರಿಂದ ಆರ್ಮ್ ರೆಸ್ಲಿಂಗ್ ಆಡುತ್ತಿದ್ದು, 2013ರಿಂದ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.