ನವದೆಹಲಿ: ಯುದ್ಧ ಸಂದರ್ಭಗಳಲ್ಲಿ 360 ಡಿಗ್ರಿಯಲ್ಲೂ ಸುರಕ್ಷತೆಯನ್ನು ಒದಗಿಸಬಲ್ಲ ದೇಶೀಯವಾಗಿ ಅಭಿವೃದ್ಧಿಪಡಿಸಿದ ವಿಶ್ವದರ್ಜೆಯ ಬುಲೆಟ್ ಪ್ರೂಫ್ ಜಾಕೆಟ್ಗಳನ್ನು ನಮ್ಮ ಯೋಧರು ಶೀಘ್ರದಲ್ಲೇ ಪಡೆದುಕೊಳ್ಳಲಿದ್ದಾರೆ. ಅತೀ ಬಲಿಷ್ಠ ಸ್ಟೀಲ್ ಕೋರ್ ಬುಲೆಟ್ನಿಂದಲೂ ಈ ಜಾಕೆಟ್ ಸುರಕ್ಷತೆ ಒದಗಿಸಲಿದೆ.
ಕೇಂದ್ರದ ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ರಕ್ಷಣಾ ಸಚಿವಾಲಯ ಈ ಜಾಕೆಟ್ಗಳ ತಯಾರಿಕೆಗೆ ರಕ್ಷಣಾ ಸಂಸ್ಥೆ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ರೂ.639 ಕೋಟಿ ವೆಚ್ಚದಲ್ಲಿ 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್ಗಳು ತಯಾರಾಗಲಿವೆ.
ಹಲವಾರು ಬಾರಿ ಫೀಲ್ಡ್ನಲ್ಲಿ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಿದ ಬಳಿಕವಷ್ಟೇ ಈ ಜಾಕೆಟ್ಗಳ ತಯಾರಿಕೆಗೆ ಸಮ್ಮತಿ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.