ನವದೆಹಲಿ: ರೈಲು ಆಗಮನದ ನಿಖರ ಸಮಯವನ್ನು ಪ್ರಯಾಣಿಕರಿಗೆ ತಿಳಿಸಿಕೊಡುವ ಜಿಪಿಎಸ್ ಡಿವೈಸ್ ವ್ಯವಸ್ಥೆಯನ್ನು ರೈಲುಗಳಿಗೆ ಅಳವಡಿಸಲಾಗುತ್ತಿದೆ.
ಲೊಕೊಮೊಟಿವ್ಗಳಿಗೆ ಜಿಪಿಎಸ್ ಡಿವೈಸ್ನ್ನು ಅಳವಡಿಸಲಾಗುತ್ತಿದ್ದು, ಇದರಿಂದ ರೈಲಿ ನಿಖರ ಸಮಯದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ಸಿಗಲಿದೆ.
ಮೊದಲ ಹಂತವಾಗಿ ಫೆಬ್ರವರಿ ಅಂತ್ಯದೊಳಗೆ ದೆಹಲಿ-ಹೌರಾ ಮತ್ತು ದೆಹಲಿ-ಮುಂಬಯಿ ರೈಲು ಮಾರ್ಗಗಳಿಗೆ ಈ ವ್ಯವಸ್ಥೆ ಲಭ್ಯವಾಗಲಿದೆ. ಮುಂದಿನ ಹಂತದಲ್ಲಿ ಇಡೀ ದೇಶದಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.
ಮ್ಯಾಪ್ಸ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಮುಘಲ್ ಸರಾಯ್ ಡಿವಿಜನ್ನಲ್ಲಿ ಈ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.