ನವದೆಹಲಿ: ದಶಕಗಳಿಂದ ಪಾಕಿಸ್ಥಾನದಲ್ಲಿ ಇದ್ದು 2015ರಲ್ಲಿ ತಾಯ್ನಾಡು ಭಾರತಕ್ಕೆ ಮರಳಿರುವ ಮೂಕ ಮತ್ತು ಕಿವುಡ ಯುವತಿ ಗೀತಾಳನ್ನು ಆಕೆಯ ಕುಟುಂಬಿಕರೊಂದಿಗೆ ಸೇರಿಸಲು ಸಹಾಯ ಮಾಡುವವರಿಗೆ 1 ಲಕ್ಷ ರೂಪಾಯಿಗಳ ಬಹುಮಾನ ನೀಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಘೋಷಿಸಿದ್ದಾರೆ.
ವಿಡಿಯೋ ಮೂಲಕ ಮನವಿ ಮಾಡಿಕೊಂಡಿರುವ ಅವರು, ಹೆಣ್ಣುಮಗಳೊಬ್ಬಳಿಗೆ ಆಕೆಯ ಹೆತ್ತವರನ್ನು ಹುಡುಕಿಕೊಡುವುದಕ್ಕಿಂತ ಉತ್ತಮವಾದ ಕಾರ್ಯ ಮತ್ತೊಂದಿಲ್ಲ, ಗೀತಾಳ ಕುಟುಂಬದ ಬಗ್ಗೆ ಯಾರಿಗಾದರೂ ಮಾಹಿತಿಯಿದ್ದರೆ ದಯವಿಟ್ಟು ತಿಳಿಸಿ ಎಂದು ಮನವಿ ಮಾಡಿದ್ದಾರೆ.
ಅಲ್ಲದೇ ‘ಗೀತಾಳ ಪೋಷಕರು ಮುಂದೆ ಬಂದು ಆಕೆಯನ್ನು ಸ್ವೀಕರಿಸಬೇಕು. ಆಕೆ ನಿಮಗೆ ಹೊರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ’ ಎಂದು ಸುಷ್ಮಾ ಹೇಳಿದ್ದಾರೆ.
2015ರ ಅಕ್ಟೋಬರ್ನಲ್ಲಿ ಪಾಕಿಸ್ಥಾನದಿಂದ ಭಾರತಕ್ಕೆ ಮರಳಿರುವ ಗೀತಾ ಪ್ರಸ್ತುತ ಇಂಧೋರ್ನಲ್ಲಿ ಮೂಕ ಮತ್ತು ಕಿವುಡರಿಗಾಗಿರುವ ಸಂಸ್ಥೆಯಲ್ಲಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.