ಮುಂಬಯಿ: ಶೀಘ್ರದಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ 2005ರ ಮಹಾತ್ಮ ಗಾಂಧಿ ಸಿರೀಸ್ನ 20 ರೂಪಾಯಿ ಮುಖಬೆಲೆಯ ನೋಟಗಳನ್ನು ಚಲಾವಣೆಗೆ ತರಲಿದೆ. ಪ್ರಸ್ತುತ ಚಲಾವಣೆಯಲ್ಲಿರುವ ನೋಟುಗಳಂತೆಯೇ ಇದು ಇರಲಿದೆ.
ಈ ನೋಟುಗಳ ನಂಬರ್ ಪ್ಯಾನಲ್ಗಳಲ್ಲಿ ’ಎಸ್’ ಎಂದು ಇನ್ಸೆಟ್ ಅಕ್ಷರ ಇರಲಿದೆ ಮತ್ತು ಆರ್ಬಿಐ ಗವರ್ನರ್ ಊರ್ಜಿತ್ ಆರ್ ಪಟೇಲ್ ಅವರ ಸಹಿ ಇರಲಿದೆ ಎಂದು ಆರ್ಬಿಐ ಅಧಿಸೂಚನೆಯಲ್ಲಿ ತಿಳಿಸಿದೆ.
ಎರಡೂ ನಂಬರ್ ಪ್ಯಾನಲ್ಗಳಲ್ಲಿ ಇನ್ಸೆಟ್ ಲೆಟರ್ ‘ಎಸ್’ ಇರಲಿದೆ, ಈ 20 ರೂಪಾಯಿ ಬ್ಯಾಂಕ್ ನೋಟುಗಳ ವಿನ್ಯಾಸ ಇದೇ ಸಿರೀಸ್ನ ಈ ಹಿಂದೆ ಚಲಾವಣೆಗೆ ತರಲಾದ ನೋಟುಗಳಂತೆಯೇ ಇರಲಿದೆ ಎಂದು ಹೇಳಿದೆ.
ಪ್ರಸ್ತುತ ಚಲಾವಣೆಯಲ್ಲಿರುವ 20 ರೂಪಾಯಿ ನೋಟುಗಳ ಚಲಾವಣೆಯೂ ಮುಂದುವರೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.