ಕೋಲ್ಕತ್ತಾ: ಈಗಾಗಲೇ ಜಿಯೋ ಸಿಮ್ ಮೂಲಕ ಜನಪ್ರಿಯವಾಗಿರುವ ರಿಲಾನ್ಸ್ ಸಂಸ್ಥೆ, ಇದೀಗ ಜನರಿಗೆ ಮತ್ತೊಂದು ಗಿಫ್ಟ್ ನೀಡಲು ಮುಂದಾಗಿದೆ.
ರಿಲಾಯನ್ಸ್ ಜಿಯೋ ತನ್ನ ಬಹು ನಿರೀಕ್ಷಿತ ೪ಜಿ ವೋಲ್ಟ್ ಫೀಚರ್ ಫೋನ್ನನ್ನು ಈ ತಿಂಗಳು ಹೊರ ತರುವ ಸಾಧ್ಯತೆ ಇದೆ. ಕೇವಲ 500ರೂ.ಗೆ ಈ ಮೊಬೈಲ್ ದೊರೆಯಲಿದೆ.
ಜುಲೈ 21ರಂದು ನಡೆಯಲಿರುವ ರಿಲಾಯನ್ಸ್ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಈ ಬಗ್ಗೆ ಘೋಷಣೆ ಹೊರ ಬೀಳುವ ಸಾಧ್ಯತೆ ಇದೆ. 2ಜಿ ಬಳಕೆದಾರರನ್ನು ನೇರವಾಗಿ 4ಜಿಗೆ ಎಳೆಯುವ ಉದ್ದೇಶ ಇದರ ಹಿಂದಿದೆ.
ಎಪ್ರಿಲ್ 2017ರ ಬಳಿಕ ಜಿಯೋಗೆ 112.55 ಮಿಲಿಯನ್ ಬಳಕೆದಾರರು ಇದ್ದಾರೆ.
ಟೆಲಿಕಾಂ ಮಾರ್ಕೆಟ್ನಲ್ಲಿ ರಿಲಾಯನ್ಸ್ ಜಿಯೋದ ಈ ಮೊಬೈಲ್ ದೊಡ್ಡ ಅಲೆಯನ್ನೇ ಎಬ್ಬಿಸುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.