ಸಹರಣ್ಪುರ್: ಹಿಂಸಾಚಾರ ಪೀಡಿತ ಉತ್ತರಪ್ರದೇಶದ ಸಹರಣ್ಪುರ್ನ್ನು ದತ್ತು ಪಡೆಯಲು ಬಿಜೆಪಿ ಸಂಸದ ರಾಘವ್ ಲಖನ್ಪಾಲ್ ಮುಂದಾಗಿದ್ದಾರೆ. ಈ ಮೂಲಕ ಆ ಜಿಲ್ಲೆಯಲ್ಲಿ ಶಾಮತಿ ಸ್ಥಾಪನೆ ಮಾಡಿ, ಅದನ್ನು ಅಭಿವೃದ್ಧಿಪಡಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಸಹರಣ್ಪುರ್ನಲ್ಲಿ ದಲಿತರು ಮತ್ತು ಇತರ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದಿತ್ತು. ಈ ಘಟನೆ ಯೋಗಿ ಆದಿತ್ಯನಾಥ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿತ್ತು. ಅಲ್ಲದೇ ಸರ್ಕಾರದ ಇಮೇಜ್ಗೂ ಧಕ್ಕೆ ತಂದಿತ್ತು. ಇದೀಗ ಆ ಜಿಲ್ಲೆ ಸಾಮಾನ್ಯ ಸ್ಥಿತಿಗೆ ಮರಳಿದೆ.
ಇದೀಗ ಘಟನೆಯಿಂದ ರಾಜ್ಯ ಸರ್ಕಾರಕ್ಕಾದ ಡ್ಯಾಮೇಜನ್ನು ತಪ್ಪಿಸುವ ಸಲುವಾಗಿ ಬಿಜೆಪಿ ಸಂಸದ ಈ ಜಿಲ್ಲೆಯನ್ನು ದತ್ತು ಪಡೆಯಲು ಮುಂದಾಗಿದ್ದಾರೆ. ಈ ಬಗ್ಗೆ ಅವರು ಚರ್ಚೆಯನ್ನೂ ನಡೆಸಿದ್ದು, ಎಲ್ಲಾ ಸಮುದಾಯಗಳ ನಡುವೆ ಪರಸ್ಪರ ಭರವಸೆ ಮೂಡಿಸುವ ಸಲುವಾಗಿ ಗ್ರಾಮವನ್ನು ದತ್ತು ಪಡೆಯುತ್ತಿರುವುದಾಗಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.