×
Home About Us Advertise With s Contact Us

ಏರ್‌ಬಸ್ ವಿಮಾನ ಪತನಗೊಳಿಸಿದ್ದು ಕೋ ಪೈಲೆಟ್!

crashಪ್ಯಾರಿಸ್: ಜರ್ಮನಿಯ ಏರ್‌ಬಸ್ ಎ320 ವಿಮಾನ ಪತನಗೊಳ್ಳಲು ಅದರ ಸಹ ಪೈಲೆಟ್ ಮುಖ್ಯ ಕಾರಣ ಎಂದು ದುರಂತದ ಬಗ್ಗೆ ತನಿಖೆ ನಡೆಸುತ್ತಿರುವ ಮುಖ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಫ್ರೆಂಚ್ ಆಲ್ಪ್ಸ್ ಪರ್ವತ ಶ್ರೇಣಿ ಏರ್‌ಬಸ್ ವಿಮಾನ ಪತನಗೊಂಡು ಅದರಲ್ಲಿದ್ದ 148 ಮಂದಿ ದುರ್ಮರಣಕ್ಕೀಡಾಗಿದ್ದರು. ಇದೀಗ ಸಹ ಪೈಲೆಟ್ ಬೇಕೆಂದೇ ವಿಮಾನವನ್ನು ಪತನಗೊಳಿಸಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ವಿಮಾನದ ಮುಖ್ಯ ಪೈಲೆಟ್ ಶೌಚಾಲಯಕ್ಕೆ ಹೋಗಿ ವಾಪಾಸ್ ಬಂದಾಗ ವಿಮಾನ ಕಾಕ್‌ಪಿಟ್ ಲಾಕ್ ಆಗಿತ್ತು. ಈ ವೇಳೆ ವಿಮಾನ ಚಲಾಯಿಸುತ್ತಿದ್ದ ಕೋ ಪೈಲೆಟ್ ಆಂಡಿಯಾಸ್ ಲುಬಿಟ್ಜ್ ಉದ್ದೇಶಪೂರ್ವಕವಾಗಿ ವಿಮಾನವನ್ನು ಪರ್ವತ ಶ್ರೇಣಿಯತ್ತ ಇಳಿಮುಖವಾಗಿ ಚಾಲನೆ ಮಾಡಿ ಪತನಗೊಳ್ಳುವಂತೆ ಮಾಡಿದ್ದಾನೆ ಎಂದು ಸಂಶಯಿಸಲಾಗಿದೆ.

ಕಾಕ್‌ಪಿಟ್‌ನ ಧ್ವನಿ ಪೆಟ್ಟಿಗೆಯಲ್ಲಿ ಮುಖ್ಯ ಪೈಲೆಟ್ ಬಾಗಿಲು ಬಡಿಯುವ ಶಬ್ದ ದಾಖಲಾಗಿದೆ. ಈ ವೇಳೆ ಒಳಗಿದ್ದ ಸಹ ಪೈಲೆಟ್ ಒಂದೇ ಒಂದು ಮಾತನ್ನೂ ಆಡಲಿಲ್ಲ. ಆತ ನಿದ್ರೆ ಅಥವಾ ಯಾವುದೇ ತೊಂದರೆಯಲ್ಲಿರಲಿಲ್ಲ. ಆತ ಬೇಕಂತಲೇ ಮುಖ್ಯಪೈಲೆಟ್ ಒಳಪ್ರವೇಶಿಸುವುದನ್ನು ತಡೆದಿದ್ದಾನೆ ಮತ್ತು ವಿಮಾನವನ್ನು ಪತನಗೊಳಿಸಿ ತಾನು ಸೇರಿದಂತೆ ಇತರ 147 ಮಂದಿಯ ಸಾವಿಗೆ ಕಾರಣನಾಗಿದ್ದಾನೆ.

ಹೀಗಾಗಿ ಈ ಪ್ರಕರಣವನ್ನು ಆಕಸ್ಮಿಕ ಎಂದು ಪರಿಗಣಿಸದೆ ದುರುದ್ದೇಶದಿಂದ ನಡೆಸಲಾದ ನರಮೇಧ ಎಂದು ಪರಿಗಣಿಸಿ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top