ಮುಂಬಯಿ: ಮಹಾರಾಷ್ಟ್ರ ಪುರಸಭಾ ಚುನಾವಣೆಯ ಎರಡನೇ ಹಂತದ ಮತದಾನ ಬುಧವಾರ ಬೆಳಗ್ಗೆ 7.30ಕ್ಕೆ ಆರಂಭಗೊಂಡಿದೆ.
ಲಾಥೂರ್ ಮತ್ತು ಪುಣೆ ಜಿಲ್ಲೆಗಳ ಪುರಸಭೆಗಳ 324 ಶಾಸಕರು ಮತ್ತು 14 ಅಧ್ಯಕ್ಷರ ಆಯ್ಕೆಯ ಭಾಗವಾಗಿ ಮತದಾನ ನಡೆಯುತ್ತಿದೆ.
ಪುರಸಭೆ ಮಂಡಳಿಯ 324 ಸ್ಥಾನಗಳಿಗೆ ಸುಮಾರು 1,326 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಅಂತೆಯೇ ಪುರಸಭಾ ಅಧ್ಯಕ್ಷರ ಸ್ಥಾನಕ್ಕೆ 106 ಅಭ್ಯರ್ಥಿಗಳು ಪೈಪೋಟಿ ನಡೆಸುತ್ತಿದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಬುಧವಾರ ಸಂಜೆ 5.30ರ ತನಕ ಮತದಾನ ನಡೆಯಲಿದ್ದು, ಮತ ಎಣಿಕೆ ಗುರುವಾರ ನಡೆಯಲಿದೆ.
ಪುಣೆ ಜಿಲ್ಲೆಯ ಬಾರಾಮತಿಯಲ್ಲಿ 171 ಅಭ್ಯರ್ಥಿಗಳು ಶಾಸರ 39 ಸ್ಥನಗಳಿಗೆ ಹಾಗೂ 7 ಮಂದಿ ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಲಿದ್ದಾರೆ. ತಾಲೇಗಾಂವ್-ದಾಭಡೆಯಲ್ಲಿ ೫೧ ಅಭ್ಯರ್ಥಿಗಳು ಶಾಸಕರ 26 ಸ್ಥಾನಗಳಿಗೆ ಹಾಗೂ 2 ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಲಿದ್ದಾರೆ.
ಲೋನಾವಾಲಾದಲ್ಲಿ 25 ಶಾಸಕ ಸ್ಥಾನಗಳಿಗೆ, 6 ಮಂದಿ ಅಧ್ಯಕ್ಷ ಸ್ಥಾನಗಳಿಗೆ, ದೌಂಡ್ನ 24 ಶಾಸಕ ಸ್ಥಾನಗಳು ಮತ್ತು 9 ಅಧ್ಯಕ್ಷ ಸ್ಥಾನಗಳು, ಶಿರೂರ್ನ 21 ಶಾಸಕ ಸ್ಥಾನಗಳು ಮತ್ತು 5 ಅಧ್ಯಕ್ಷ ಸ್ಥಾನಗಳು ಜೆಜುರಿ, ಜುನ್ನಾರ್ ಮತ್ತಿತರ ಸ್ಥಳಗಳಲ್ಲಿ ಮತದಾನ ನಡೆಯಲಿದೆ.
ಪುಣೆ ಜಿಲ್ಲೆಯಲ್ಲಿ ಒಟ್ಟು 435 ಮತಗಟ್ಟೆಗಳಿದ್ದು, 2,522 ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಲಾಥೂರ್ನ ಅಹ್ಮದ್ನಗರ ಪುರಸಭೆಯ 23 ಸ್ಥಾನಗಳಿಗೆ 115 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.