ಮುಂಬಯಿ: ಅಮೇರಿಕಾದ 45 ನೇ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ಗೆ ಬಾಲಿವುಡ್ ಮತ್ತು ಹಾಲಿವುಡ್ ಶುಭಾಶಯ ಕೋರಿದೆ.
ಯುಎಸ್ ಅಧ್ಯಕ್ಷೀಯ ಚುನಾವಣೆ ಗೆದ್ದು ಟ್ರಂಪ್ ಇತಿಹಾಸ ನಿರ್ಮಿಸಿದ್ದಾರೆ. ಮುಸ್ಲಿಮರು ಮತ್ತು ಮಹಿಳೆಯರ ವಿರುದ್ಧ ವಿವಾದಾತ್ಮಕ ಭಾಷಣ ನಿಡಿದ ಮತ್ತು ಹಿಲರಿ ಕ್ಲಿಂಟನ್ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ಡೊನಾಲ್ಡ್ ಟ್ರಂಪ್ಗೆ ಹಾಲಿವುಡ್ ಮತ್ತು ಬಾಲಿವುಡ್ ಚಿತ್ರರಂಗ ಮತ್ತು ವಿಶವದಾದ್ಯಂತ ಭಾರತೀಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಬಾಲಿವುಡ್ ನಿರ್ದೇಶಕ ರಾಮ ಗೋಪಾಲ್ ವರ್ಮ ಟ್ವಿಟರ್ ಮೂಲಕ ಬೆಂಬಲ ಸೊಚಿಸಿದರು ಮತ್ತು ಮಿಶಲ್ ಒಬಮಾರವರು ಬಗ್ಗೆ ಟ್ವೋಟ್ ಮಾಡಿದರು. ಹಾಲಿವುಡ್ ಮತ್ತು ಬಾಲಿವುಡ್ ಯಿಂದ ಮಿಶ್ರಪ್ರತಿಕ್ರಿಯೆಗಳು ಬಂದರೆ ನಟಿ ಹಾಗೂ ಲೇಖಕಿ ಟ್ವಿನಕಲ್ ಖನ್ನಾ ‘ಡೊನಾಲ್ಡ್ ಡಕ್ ಶ್ವೇತಭವನದತ್ತ ತೇಲಾಡುತ್ತ ಬಂದಿದ್ದಾರೆ. ಶ್ವೇತಭವನ ದುಃಸ್ವಪ್ನದಂತೆ ತೋರುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಸಂಗೀತ ಕ್ಷೇತ್ರದಿಂದ ಕೂಡ ಶುಭಾಶಯಗಳು ಬಂದವು.
ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದು, ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಟ್ರಂ1ಪ್ ಜೊತೆ ಕಾರ್ಯ ನಿರ್ವಹಿಸುವುದನ್ನು ಭಾರತ ಎದುರು ನೋಡುತ್ತಿದೆ ಎಂದು ಮೋದಿ ಈ ಸಂದರ್ಭ ಹೇಳಿದ್ದಾರೆ.
ತಮ್ಮ ಚುನಾವಣಾ ಪ್ರಚಾರದ ವೇಳೆ ಭಾರತದ ಜೊತೆಗಿನ ಸ್ನೇಹ ಸಂಬಂಧವನ್ನು ಅಭಿವ್ಯಕ್ತಗೊಳಿಸಿದಕ್ಕಾಗಿ ಟ್ರಂಪ್ ಅವರನ್ನು ಪ್ರಧಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.