ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ‘ಛತ್ ಪೂಜಾ’ ಪ್ರಯುಕ್ತ ದೇಶದ ಜನತೆಗೆ ಶುಭ ಕೋರಿದ್ದಾರೆ.
ಭಕ್ತಾದಿಗಳು ಭೂಮಿಯ ಮೇಲೆ ಜೀವನ ನಡೆಸಲು ಜಗತ್ತಿಗೆ ಬೆಳಕು ನೀಡಿ ಕರುಣಿಸುವುದಕ್ಕಾಗಿ ಸೂರ್ಯ ದೇವರಿಗೆ ಧನ್ಯವಾದ ಅರ್ಪಿಸುವ ಸಲುವಾಗಿ ಛತ್ ಪೂಜೆಯನ್ನು ಆಚರಿಸುತ್ತಾರೆ. ಛತ್ ಪೂಜೆಯನ್ನು ಪ್ರತಿ ವರ್ಷ ನವೆಂಬರ್ 6ರಂದು ಆಚರಿಲಾಗುತ್ತದೆ. ಈ ಹಬ್ಬವನ್ನು ವಿಶೇಷವಾಗಿ ಬಿಹಾರ ಮತ್ತು ನೇಪಾಳದ ಮಿಥಿಲಾದಲ್ಲಿ ಆಚರಿಸಲಾಗುತ್ತದೆ.
ಹಿಂದು ಧರ್ಮದಲ್ಲಿ ಸೂರ್ಯ ದೇವರನ್ನು ವೈದ್ಯರು ಎಂದು ನಂಬಲಾಗಿದ್ದು, ಅನೇಕ ಅನಾರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತಾನೆ ಎಂದು ನಂಬಲಾಗಿದೆ. ಸೂರ್ಯ ದೇವರ ಕೃಪೆಯಿಂದ ದೀರ್ಘಾಯುಷ್ಯ, ಅಭ್ಯುದಯ, ಅಭಿವೃದ್ಧಿ, ಪ್ರಗತಿ ಲಭಿಸುತ್ತದೆ ಎಂಬುದು ಜನರ ನಂಬಿಕೆ.
ಭಕ್ತಾದಿಗಳು ಕಠಿಣ ವ್ರತಗಳನ್ನು ಪಾಲಿಸುವ ಮೂಲಕ ಈ ಹಬ್ಬವನ್ನು 4 ದಿನಗಳ ಕಾಲ ಆಚರಿಸುತ್ತಾರೆ. ಇದು ಕಠಿಣ ವ್ರತ ಉಪವಾಸ, ನೀರು ಜಲ ವ್ರತ (ನೀರು ಕುಡಿಯದೇ ಇರುವುದು), ಪವಿತ್ರ ಸ್ನಾನ, ಸೂರ್ಯೋದಯ ಮತ್ತು ಸೂರ್ಯಾಸ್ತದ ವೇಳೆ ಪ್ರಾರ್ಥನೆ, ನದಿ, ಸರೋವರಗಳಲ್ಲಿ ನಿಂತು ದೀರ್ಘ ಕಾಲ ಧ್ಯಾನ ಮಾಡುವುದು ಮುಂತಾದ ಧಾರ್ಮಿಕ ಕ್ರಿಯೆಗಳನ್ನು ನಡೆಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.