ನವದೆಹಲಿ: ಕಂಪೆನಿ ಮತ್ತು ಆಹಾರ ನಿಯಂತ್ರಕದ ಸ್ವಾಮ್ಯದಲ್ಲಿರುವ ಕಾಲಾವಧಿ ಪೂರ್ಣಗೊಂಡ 550 ಟನ್ ಮ್ಯಾಗಿ ನೂಡಲ್ಸ್ ನಾಶಪಡಿಸಲು ನೆಸ್ಲೆ ಇಂಡಿಯಾ ಹಾಗೂ ಎಫ್ಎಸ್ಎಸ್ಎಐಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಯು.ಯು. ಲಲಿತ್ ಅರನ್ನೊಳಗೊಂಡ ನ್ಯಾಯಪೀಠ ಭಾರತದಾದ್ಯಂತ ಕಂಪೆನಿ ಹಾಗೂ ಲಖ್ನೌದಲ್ಲಿರುವ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ದಾಸ್ತಾನು ಹೊಂದಿರುವ ಮ್ಯಾಗಿ ನೂಡಲ್ಸ್ನ್ನು ಕಕ್ಷಿದಾರರ ಒಪ್ಪಂದದ ಆಧಾರದಲ್ಲಿ ನಾಶ ಮಾಡಲಾಗುವುದು ಎಂದು ಹೇಳಿದೆ.
ನೆಸ್ಲೆ ಇಂಡಿಯಾ ಪರ ವಕೀಲ ಅರವಿಂದ ದತ್ತಾರ್, ಎಫ್ಎಸ್ಎಸ್ಎಐ ಸಿಮೆಂಟ್ ಘಟಕದಲ್ಲಿ ಆಹಾರ ದಾಸ್ತಾನು ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ದಹನ ಮಾಡಬಹುದು ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.