ಏಷ್ಯಾ ವಲಯದ ಅಭಿವೃದ್ಧಿಗೆ ರೂ.500 ಕೋಟಿ ನಿಧಿ ಬಿಡುಗಡೆಗೆ ಸಂಪುಟ ಅಸ್ತು

Published on : September 01, 2016,
By :
Share on FacebookTweet about this on TwitterShare on Google+

Cabinet2

ನವದೆಹಲಿ: ಕಾಂಬೋಡಿಯಾ, ವೀಯೆಟ್ನಾಂ, ಮ್ಯಾನ್ಮಾರ್ ಮತ್ತು ಲಾವೋಸ್‌ಗಳಲ್ಲಿ ಆರ್ಥಿಕ ಅಸ್ತಿತ್ವ ಕಂಡುಕೊಳ್ಳಲು ಕೇಂದ್ರ ಸಂಪುಟ 500 ಕೋಟಿ ರೂ. ಯೋಜನೆಯ ಅಭಿವೃದ್ಧಿ ನಿಧಿ ಬಿಡುಗಡೆಗೆ ಒಪ್ಪಿಗೆ ನೀಡಿದೆ.

ಈ ವಲಯಗಳು ಚೀನಾ ಮತ್ತು ಯೂರೋಪಿಯನ್ ಒಕ್ಕೂಟದ ಗೇಟ್‌ವೇ ಆಗಿ ನಿರ್ವಹಿಸುತ್ತಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಂಪುಟ ಈ ರಾಷ್ಟ್ರಗಳಲ್ಲಿ ಭಾರತದ ಆರ್ಥಿಕ ಉಪಸ್ಥಿತಿ ವರ್ಧಿಸಲು ಅಭಿವೃದ್ಧಿ ಯೋಜನಾ ನಿಧಿ ಸೃಷ್ಟಿಗೆ ರೂ. ೫೦೦ ಕೋಟಿ ಅನುಮೋದನೆ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.

ವಾಣಿಜ್ಯ ಇಲಾಖೆ ಅಭೀವೃದ್ಧಿ ಯೋಜನಾ ನಿಧಿ ನಡೆಸಲಿದ್ದು, ಎಕ್ಸಿಂ ಬ್ಯಾಂಕ್ ನಿಧಿಯ ಕಾರ್ಯ ನಿರ್ವಹಿಸಲಿದೆ. ವಾಣಿಜ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಆಂತರಿಕ ಸಚಿವರ ಸಮಿತಿ ಇದರ ಆಡಳಿತ ನಡೆಸಲಿದೆ.

ಭಾರತ ಪ್ರದೇಶಿಕ ಮೌಲ್ಯ ಅನುಕೂಲ ಹೊಂದಲಿದ್ದು, ಸುದೀರ್ಘ ಅವಧಿಯ ದೇಶೀಯ ಕಚ್ಚಾ ಸರಕುಗಳು ಮತ್ತು ಮಧ್ಯವರ್ತಿ ಸರಕುಗಳ ಮಾರುಕಟ್ಟೆ ಲಾಭ ಪಡೆಯಲಿದೆ.

ಪ್ರಾದೇಶಿಕ ಸಂಪರ್ಕದಿಂದ ಕಚ್ಚಾ ವಸ್ತುಗಳ ಲಭ್ಯತೆ ಭಾರತದ ಉದ್ಯಮಕ್ಕೆ ಸಹಾಯಕವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

 

Leave a Reply