ನವದೆಹಲಿ: ಐದು ವರ್ಷದೊಳಗಿನ 1.26 ಮಿಲಿಯನ್ ಮಕ್ಕಳು ಭಾರತದಲ್ಲಿ ಪ್ರತಿವರ್ಷ ಸಾವಿಗೀಡಾಗುತ್ತಿದ್ದಾರೆ. ಇದರಲ್ಲಿ ಅರ್ಧದಷ್ಟು ಸಾವು ಹುಟ್ಟಿದ ನಾಲ್ಕು ವಾರಗಳೊಳಗೆ ಸಂಭವಿಸುತ್ತಿದೆ ಎಂದು ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಅವಧಿಗೂ ಮುನ್ನ ಜನನ ಹಾಗೂ ಇನ್ಫೆಕ್ಷನ್ಗಳು ಸಾವಿಗೆ ಪ್ರಮುಖ ಕಾರಣವಾಗುತ್ತಿದೆ. ಉಳಿದಂತೆ ತೂಕ ಕಡಿಮೆ, ಜನನ ತೊಂದರೆ ಮುಂತಾದ ಸಮಸ್ಯೆಗಳಿಂದ ಮಕ್ಕಳು ಹುಟ್ಟಿದ ೨೮ ದಿನದೊಳಗೆ ಸಾವನ್ನಪ್ಪುತ್ತಿವೆ ಎಂದು ಆರೋಗ್ಯ ಸಚಿವ ಜೆಪಿ ನಡ್ಡಾ ರಾಜ್ಯಸಭೆಗೆ ಲಿಖಿತ ಮಾಹಿತಿ ನೀಡಿದ್ದಾರೆ.
ಐದು ವರ್ಷದೊಳಗೆ ಮಕ್ಕಳು ಸಾಯಲು ಡಯೇರಿಯಾ ಕೂಡ ಕಾರಣವಾಗಿರುತ್ತದೆ.
ಸರ್ಕಾರ ಎಸ್ಎಂಎಸ್ ಆಧಾರಿತ ಎಲೆಕ್ಟ್ರಾನಿಕ್ ವ್ಯಾಕ್ಸಿನ್ ಇಂಟೆಲಿಜೆನ್ಸ್ ನೆಟ್ವರ್ಕ್ನ್ನು ಆರಂಭಿಸಿದ್ದು, ಇದು ವ್ಯಾಕ್ಸಿನ್ ಸ್ಟಾಕ್ಗಳು 4,476 ಕೋಲ್ಡ್ ಚೈನ್ನಲ್ಲಿ ಸ್ಟೋರ್ ಆಗುವಂತೆ ನೋಡಿಕೊಳ್ಳುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ವ್ಯಾಕ್ಸಿನ್ ಯುನಿಟ್ಗಳನ್ನು ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶಗಳ ೧೬೬ ಜಿಲ್ಲೆಗಳಲ್ಲಿ ಆರಂಭಿಸಲಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.