ಮಂಗಳೂರು : ಎಪ್ರಿಲ್ 14 ರಿಂದ 25 ರ ತನಕ ನಗರದ ನೆಹರೂ ಮೈದಾನದಲ್ಲಿ ರಾಷ್ಟ್ರೀಯ ಫುಟ್ ಬಾಲ್ ಟೂರ್ನ್ಮೆಂಟ್ 2016 ನ್ನು ಆಯೋಜಿಸಲಾಗಿದೆ ಎಂದು ಕೆ. ಅಶ್ರಫ್ ಅವರು ತಿಳಿಸಿದ್ದಾರೆ.
ಸೌಹಾರ್ದತೆಗಾಗಿ ಈ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದ್ದು 1958 ರಲ್ಲಿ ದಿ.ಜನಾಬ್ .ಎಂ. ಅಹ್ಮದ್ ಮಾಸ್ತರ್ ರವರ ಆಶ್ರಯದಲ್ಲಿ ಮಂಗಳೂರು ಸ್ಪೋರ್ಟಿಂಗ್ ಕ್ಲಬ್ ಸ್ಥಾಪಿಸಿದ್ದು, ಈ ಕಾರ್ಯಕ್ರಮದ ಆಯೋಜನೆಯನ್ನು ಈ ಕ್ಲಬ್ ನಡೆಸಲಿದೆ ಎಂದಿದ್ದಾರೆ.
ಈ ಪಂದ್ಯಾಟದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಮಾಹಾರಾಷ್ಟ್ರ, ಹಾಗೂ ಇತರ ರಾಜ್ಯಗಳ ಹದಿನೆಂಟು ತಂಡಗಳು ಆಟವಾಡಲಿದ್ದು, ಮಂಗಳೂರಿನ ಪ್ರತಿಷ್ಠಿತ ತಂಡಗಳು ಭಾಗವಹಿಸಲಿದೆ.
ಪ್ರತಿದಿನ ನಾಕೌಟ್ ಪಂದ್ಯಗಳು ನಡೆಯಲಿದ್ದು, 3-30 ರಿಂದ ಪಂದ್ಯಾಟ ಆರಂಭವಾಗಲಿದೆ. ಎ.25 ರಂದು ಫೈನಲ್ ಪಂದ್ಯಾಟ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.