×
Home About Us Advertise With s Contact Us

ಉಗ್ರ ವಿರೋಧಿ ಕಾರ್ಯಾಚರಣೆ ನೇರ ಪ್ರಸಾರಕ್ಕೆ ನಿಷೇಧ

militaryನವದೆಹಲಿ: ಉಗ್ರರ ವಿರುದ್ಧದ ಕಾರ್ಯಾಚರಣೆಯ ದೃಶ್ಯಾವಳಿಗಳನ್ನು ಟಿವಿ ಚಾನೆಲ್‌ಗಳು ನೇರಪ್ರಸಾರ ಮಾಡುವುದನ್ನು ನಿಷೇಧಿಸುವ ಸಲುವಾಗಿ ರೂಪಿತಗೊಂಡಿರುವ ಹೊಸ ನಿಯಮಕ್ಕ್ಕೆ ಮಾಹಿತಿ ಮತ್ತು ಪ್ರಸಾರಖಾತೆ ಸಚಿವಾಲಯ ಒಪ್ಪಿಗೆ ಸೂಚಿಸಿದೆ.

ಹೊಸ ಕಾನೂನಿನ ಅನ್ವಯ ಇಂತಹ ಸಂದರ್ಭಗಳಲ್ಲಿ ಪ್ರಸಾರಕರು ನಿಯೋಜಿತ ಅಧಿಕಾರಿಗಳು ನೀಡುವ ವಿವರಣೆಗಳ ವರದಿಯನ್ನು ಮತ್ತು ಯೋಧರು ನಡೆಸುವ ಕಾರ್ಯಾಚರಣೆಗಳನ್ನು ನೇರ ಪ್ರಸಾರ ಮಾಡುವಂತಿಲ್ಲ. ಕಾರ್ಯಾಚರಣೆ ಸಂಪೂರ್ಣವಾಗಿ ಮುಕ್ತಾಯವಾದ ಬಳಿಕವಷ್ಟೇ ಇವುಗಳನ್ನು ಪ್ರಸಾರ ಮಾಡಬೇಕು.

ಈ ಹೊಸ ಷರತ್ತನ್ನು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ ರೂಲ್ಸ್ 1994ಕ್ಕೆ ಅಳವಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೃಹಸಚಿವಾಲಯದ ಸೂಚನೆಯ ಮೇರೆಗೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಈ ಹೊಸ ನಿಯಮವನ್ನು ರೂಪಿಸಿದೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top